ಮಂಡ್ಯ : ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ ಕಾಂಗ್ರೆಸ್ ಸರ್ಕಾರ ಮಧ್ಯದ ದರ ಏರಿಕೆ ಮಾಡಿದ್ದಾಯ್ತು ನೋಂದಣಿ ಮತ್ತು ಮಧುರಂಕ ಶುಲ್ಕ ಹೆಚ್ಚಳ ಮಾಡಿದ್ದಾಯಿತು ಐದು ಗ್ಯಾರಂಟಿ ಯೋಜನೆಗಾಗಿ ತೈಲದ ಹೆಚ್ಚಳ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲಬೆಲೆ ಏರಿಕೆಯಿಂದ ಟ್ರಾನ್ಸ್ಪೋರ್ಟ್ ಗೆ ಹೊಡೆದ ಬೀಳುತ್ತದೆ. ಬಡವರು ರೈತರಿಗೆ ತೊಂದರೆಯಾಗುತ್ತದೆ. ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಹಣದೊಚ್ಚಿದ್ದಾರೋ? ಎಷ್ಟು ದಿನ ಈ ಆಟ ಆಡುತ್ತಾರೋ ಈ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದರು.

ಮೋದಿ ಎರಡು ಇಲಾಖೆ ಕೊಟ್ಟಿದ್ದಾರೆ. ಹಾಗಾಗಿ ನನಗೆ ದೊಡ್ಡ ಸವಾಲು ಇದೆ. ಎರಡು ಇಲಾಖೆ ಅಧಿಕಾರಿಗಳ ರಿವ್ಯೂ ಮೀಟಿಂಗ್ ಮಾಡಿದ್ದೇನೆ. ಪ್ರಥಮ ಸಹಿ ರಾಜ್ಯದ ಉದ್ಯೋಗದ ಸಹಿ. ಮುಂದಿನ 50 ವರ್ಷಗಳ ಕಾಲ ಅದಿರು ಉತ್ಪಾದನೆ ನಡೆಯುತ್ತದೆ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.

Share.
Exit mobile version