ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಕೇಂದ್ರ ಸಚಿವರಾದ ಮಾತ್ರಕ್ಕೆ ಹೆಚ್.ಡಿ ಕುಮಾರಸ್ವಾಮಿ ಏನು ಮಂಡ್ಯದ ಒಡೆಯರಾಗುವುದಕ್ಕೆ ಆಗುವುದಿಲ್ಲ ಅಂತ ಶಾಸಕ ಕದಲೂರು ಉದಯ್ ವಾಗ್ಧಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಲೋಕಸಭಾ ಚುನಾವಣೆಯ ಆತ್ಮಾವಲೋಕನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ಅವರು, ಹೆಚ್. ಡಿ ಕುಮಾರಸ್ವಾಮಿ ರವರು ಲೋಕಸಭಾ ಸದಸ್ಯರು ಹಾಗೂ ಕೇಂದ್ರದಲ್ಲಿ ಮಂತ್ರಿಯಾದ ಮಾತ್ರಕ್ಕೆ ಮಂಡ್ಯದ ಒಡೆಯರಾಗುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ ಎಂದ ಅವರು,ಇನ್ನೂ ನಾಲ್ಕು ವರ್ಷ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರುಗಳು ಇರುತ್ತಾರೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುತ್ತದೆ ಎಂದ ಅವರು ಈ ಸೋಲಿಗೆ ಮುಂದಿನ ಚುನಾವಣೆಗಳಲ್ಲೇ ಉತ್ತರ ನೀಡಬೇಕಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಶಂಕರೇಗೌಡ, ಎಸ್. ಎಂ ಕೃಷ್ಣ, ಅಂಬರೀಷ್ ಸೇರಿದಂತೆ ಹಲವಾರು ದೊಡ್ಡ ವ್ಯಕ್ತಿಗಳು ಗೆಲುವು ಹಾಗೂ ಸೋಲನ್ನು ಕಂಡಿದ್ದಾರೆಯ್ಯಾದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಸೋತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಎದೆಗುಂದಬೇಕಿಲ್ಲ ಎಂದರು.

ಉತ್ತರ ಭಾರತದಲ್ಲಿ ಮೋದಿ ಅಲೆ ಏನೂ ಕೆಲಸ ಮಾಡಿಲ್ಲ, ಆದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲವು ಕಡೆ ಎನ್ ಡಿ ಎ ಹೆಚ್ಚು ಸ್ಥಾನಗಳನ್ನು ಗಳಿಸಿದೆ ಅಷ್ಟೇ,ಅಂತೆಯೇ ರಾಮನಗರದಲ್ಲಿ ಮಂಡ್ಯದಂತೆಯೇ ಡಿ. ಕೆ ಸುರೇಶ್ ರನ್ನು ಸೋಲಿಸಿರುವುದು ಬೇಸರ ತಂದಿದೆ ಎಂದರು.

ಕೆಲವರು ಜೆಡಿಎಸ್ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಹೆಚ್. ಡಿ. ಕೆ ಗೆಲುವು ಸಾಧಿಸಿದ ಬಳಿಕ ದಬ್ಬಾಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ ಆದರೆ ಆ ರೀತಿಯದ್ದು ಏನೂ ನಡೆಯುವುದಿಲ್ಲ ಅಂತಹವರಿಗೆ ಉತ್ತರ ಕೊಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು,ನೀರು ಕೊಡಿಸಲಿಲ್ಲ ಅದಕ್ಕೆ ಸರಿಯಾಗಿ ವೋಟ್ ಬರಲಿಲ್ಲ,ಅತಿಯಾದ ಆತ್ಮವಿಶ್ವಾಸ,ಸ್ಟಾರ್ ಚಂದ್ರು ಯಾರಿಗೂ ಗೊತ್ತಿರಲಿಲ್ಲ ಯಾರಿಗಾದರೂ ಸ್ಥಳೀಯರಿಗೆ ಕೊಟ್ಟಿದ್ದರೆ ಇಷ್ಟೊಂದು ಹೀನಾಯ ಸೋಲು ಬರುತ್ತಿರಲಿಲ್ಲ,ಜೆಡಿಎಸ್ ನಿಂದ ಪ್ರಬಲ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಯಾದ ಹೆಚ್. ಡಿ ಕುಮಾರಸ್ವಾಮಿ ರವರು ಅಭ್ಯರ್ಥಿಯಾಗಿದ್ದು ಅಂತೆಯೇ ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವ ಕಾರಣದಿಂದ ಸೇರಿದಂತೆ ಒಬ್ಬೊಬ್ಬರು ಒಂದೊಂದು ಇತ್ಯಾದಿ ಕಾರಣಗಳನ್ನು ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ವರದಿ: ಗಿರೀಶ್ ರಾಜ್, ಮಂಡ್ಯ

BIG NEWS: ‘ಸಚಿವ ದಿನೇಶ್ ಗುಂಡೂರಾವ್’ ದಿಟ್ಟ ಹೆಜ್ಜೆ: ‘ಆರೋಗ್ಯ ಇಲಾಖೆ ನೌಕರ’ರನ್ನು ‘ಕೌನ್ಸಿಲಿಂಗ್’ ಮೂಲಕ ವರ್ಗಾವಣೆ

Nitish Kumar Health: ಬಿಹಾರ ಮುಖ್ಯಮಂತ್ರಿ ‘ನಿತೀಶ್ ಕುಮಾರ್’ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Share.
Exit mobile version