ರಾಯಚೂರು : ರಾಯಚೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕಾಲುವೆ ನೀರಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ರಾಯಚೂರು ತಾಲೂಕಿನ ಗಾಣದಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ನಿನ್ನೆ ಪಂಚಮುಖಿ ಆಂಜನೇಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪೋಷಕರ ಜೊತೆ ಮಕ್ಕಳು ಜಾತ್ರೆಗೆ ಬಂದಿದ್ದಾಗ ನೀರು ಪಾಲಾಗಿದ್ದಾರೆ.
ಕಾಲುವೆಯಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ನಡೆದಿದೆ ತೆಲಂಗಾಣದ ಗದ್ವಾಲ್ ಮೂಲದ ಅಂಜಲಿ (17) ಹಾಗೂ ಆಂಧ್ರಪ್ರದೇಶದ ಎಮ್ಮಿಗನೂರಿನ ರಘು (14) ನೀರು ಪಾಲಾಗಿದ್ದಾರೆ. ಕಾಲುವೆಯಲ್ಲಿ ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿಗಳು ಮಕ್ಕಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.