ಧಾರವಾಡ : ಧಾರವಾಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಚಲಿಸುತ್ತೀದ್ದ ಲಾರಿಯ ಚಕ್ರದ ಅಡಿಗೆ ಸಿಲುಕಿ ಇಬ್ಬರು ಯುವಕರು ಲಾರಿಯ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ನಡೆದಿದೆ.
ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ಕಿಶನ್ ಖಾನವಾಲೆ (30) ಮತ್ತು ಕಿರಣ ಖಡವಾಕರ್ (32) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ಸ್ಕೂಟಿ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಕೂಟಿ ಸವಾರರು ಲಾರಿ ಚಕ್ರದಡಿ ಸಿಲುಕಿದ್ದಾರೆ. ಪರಿಣಾಮ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡು ಬಿದ್ದಿದ್ದವು.
ಘಟನೆಯ ಬಳಿಕ ಸ್ಥಳೀಯರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ತೆರವುಗೊಳಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








