ತಮಿಳುನಾಡು : ತಮಿಳುನಾಡು ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಕೂಡ ಬಂದಿದೆ. ಕೇವಲ ಒಂದೇ ಒಂದು ಮತದಿಂದ ಡಿಎಂಕೆ ಸಚಿವ ಪೆರಿಯಾಕರುಪ್ಪನ್ ಸೋಲು ಕಂಡಿದ್ದಾರೆ. ಒಂದು ಮತದಿಂದ ಟಿವಿಕೆ ಅಭ್ಯರ್ಥಿ ಶ್ರೀನಿವಾಸ್ ಸೇತುಪತಿ ಗೆಲುವು ಕಂಡಿದ್ದಾರೆ.
ಹೌದು ತಮಿಳುನಾಡಿನ ತಿರುಪುತ್ತೂರ್ ನಲ್ಲಿ ಈ ಅಚ್ಚರಿ ಫಲಿತಾಂಶ ಬಂದಿದೆ. ಸಚಿವ ಕೆ ಆರ್ ಪೆರಿಯಾಕರುಪ್ಪನ್ ಪಡೆದಿದ್ದು ಒಟ್ಟು 83, 374 ಮತಗಳು. ಇನ್ನು ಟಿ ವಿ ಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಪಡೆದಿದ್ದು 83,375 ಮತಗಳು ಪಡೆದಿದ್ದಾರೆ.ಹಾಗಾಗಿ ಒಂದು ಮತ ಅಂತರದಿಂದ ಟಿ ವಿ ಕೆ ಶ್ರೀನಿವಾಸ ಸೇತುಪತಿ ಗೆದ್ದಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಈ ರೀತಿ ಅಚ್ಚರಿ ಫಲಿತಾಂಶ ಬಂದಿದೆ.








