ಬೆಂಗಳೂರು : ಇಂದಿನಿಂದ ಹಾಲು, ಮೊಸರು ವಿದ್ಯುತ್ ದರ ಹೆಚ್ಚಳವಾಗಲಿದ್ದು, ಜನತೆ ದರ ಹೆಚ್ಚಳದಿಂದ ತತ್ತರಿಸಿ ಹೋಗಿದ್ದಾರೆ. ಸಂಪುಟ ಸಭೆಯಲ್ಲಿ ನಿರ್ಧರಿಸಿದಂತೆ ಇಂದಿನಿಂದ ನಂದಿನಿ ಹಾಲಿನ ದರ 4 ರೂ ಏರಿಕೆ ಮಾಡಿ ಪರಿಷ್ಕೃತ ದರ ಜಾರಿಯಾಗಿದೆ. ಆದರೆ ಬೆಂಗಳೂರಿನ ಜನತೆಗೆ ತ್ರಿಬಲ್ ಶಾಕ್ ಎದುರಾಗಿದ್ದು, ಹಾಲು, ವಿದ್ಯುತ್ ಜೊತೆಗೆ ಇಂದಿನಿಂದ ಅವರು ಕಸಕ್ಕೂ ತೆರಿಗೆ ಕಟ್ಟಬೇಕು.
ಹೌದು ಹಾಲು ಕರೆಂಟ್ ದರ ಏರಿಕೆ ಜೊತೆ ಕಸಕ್ಕೂ ತೆರಿಗೆ ಕಟ್ಟಬೇಕಾಗಿದೆ. ಇಂದಿನಿಂದ ಬಿಬಿಎಂಪಿ ಕಸ ಸಂಗ್ರಹಕ್ಕೂ ಸೆಸ್ ಹೇರಲಿದೆ. ಇಂದಿನಿಂದ ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಕಟ್ಟಬೇಕು. ಅಂಗಡಿ ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿ ಮಾಡಲಿದೆ.ಕಸದ ತೆರಿಗೆ ಮೂಲಕ 600 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಹೊಂದಲಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಮತ್ತು ವಿಲೇವಾರಿ ವೆಚ್ಚ ಅಂತ ಬಿಬಿಎಂಪಿ ಸೆಸ್ ಸಂಗ್ರಹಕ್ಕೆ ಮುಂದಾಗಿದೆ. ಆಸ್ತಿ ತೆರಿಗೆ ಜೊತೆಗೆ ಕಸದ ಸೆಸ್ ವಸೂಲಿ ಮಾಡಲಿದೆ.