ಬೀದರ್ : ಬೀದರ್ ನಲ್ಲಿ ಘೋರ ಘಟನೆ ಒಂದು ನಡೆದಿದ್ದು ಮನೆಯ ಮುಂದೆ ಇರುವ ಚರಂಡಿಗೆ ಬಿದ್ದು ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಮಲ್ಲಿಪರ್ಜಾಪುರ ಎಂಬಲ್ಲಿ ನಡೆದಿದೆ. ಶಿವರಾತ್ರಿ ಹಬ್ಬಕ್ಕೆ ಅಂತ ಅಜ್ಜಿ ಮನೆಗೆ ಬಂದಿದ್ದಾಗ ಈ ಒಂದು ಘಟನೆ ಸಂಭವಿಸಿದೆ.
ಮನೆ ಮುಂದೆ ಆಟವಾಡುತ್ತಿರುವಾಗ ಅಲ್ಲಿಯೇ ಇದ್ದ ಚರಂಡಿಗೆ ಆಯತಪ್ಪಿ ಅವಿನಾಶ್ (5) ಬಿದ್ದಿದ್ದಾನೆ. ಗುಂಡಿ ತುಂಬಾ ಆಳವಿದ್ದು ನೀರು ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಹೊರಬರಲಾಗದೆ ಅಂಕುಶ್ ಅಲ್ಲಿಯೇ ಉಸಿರುಗುಟ್ಟು ಸಾವನಪ್ಪಿದ್ದಾನೆ. ಗ್ರಾಮ ಪಂಚಾಯಿತಿ ಗುಂಡಿ ಮುಚ್ಚದೆ ಇರುವುದರಿಂದ ಮಗುವಿಗೆ ಸಾವಿಗೆ ಕಾರಣ. ಪಿಡಿಒ ವಿರುದ್ಧ ಕ್ರಮ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.








