ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕಾರು ಹರಿದು ಒಂದುವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಮನಿ ಬಳಿ ಈ ಒಂದು ಘಟನೆ ಸಂಭವಿಸಿದ್ದು, ಬೆಳಿಗ್ಗೆ ಮನೆಯಿಂದ ಕಾರು ಹೊರ ತೆಗೆಯುತ್ತಿದ್ದ ವೇಳೆ ಈ ಒಂದು ದುರಂತ ಸಂಭವಿಸಿದೆ.
ಮನೆಯ ಮಾಲೀಕ ಸ್ವಾಮಿ ಎಂಬುವವರು ಕಾರು ಹೊರ ತೆಗೆಯುತ್ತಿದ್ದ ವೇಳೆ ಮನೆ ಬಾಡಿಗೆಗೆ ಇದ್ದ ಕುಟುಂಬದ ಮಗು ಸಾವನ್ನಪ್ಪಿದೆ. ಕಾರನ್ನು ರಿವರ್ಸ್ ತೆಗೆಯುವಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಒಂದುವರೆ ವರ್ಷದ ಮಹಮ್ಮದ್ ಉಮರ್ ಫಾರೂಕ್ ಎನ್ನುವ ಮಗು ಸಾವನ್ನಪ್ಪಿದೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಒಂದು ಮನೆಯಲ್ಲಿ ಕುಣಿಗಲ್ ನಿಂದ ಕುಟುಂಬ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಬಾಡಿಗೆ ಇದ್ದ ಸಂಬಂಧಿಕರ ಮನೆಗೆ ಮಗುವಿನ ಪೋಷಕರು ಬಂದಿದ್ದರು. ಮನೆ ಹೊರಗಡೆ ಮಹಮ್ಮದ್ ಆಟ ಆಡುತ್ತಿದ್ದ ಆಗ ಮನೆಯ ಮಾಲಿಕ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಕಾರು ಹರಿದು ಸಾವನ್ನಪ್ಪಿದೆ. ಮಾಲೀಕನಿಗೆ ಮಗುವಿದ್ದಿದ್ದು ಕಂಡು ಬರದೆ ಇದ್ದಿದ್ದರಿಂದ ಈ ಒಂದು ದುರ್ಘಟನೆ ಸಂಭವಿಸಿದೆ.