ಕೋಲಾರ : ಇಂದು SSLC ಫಲಿತಾಂಶ ಪ್ರಕಟವಾಗಿದ್ದು ರಾಜ್ಯದಲ್ಲಿ ಶೇಕಡ 94 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇನ್ನು SSLC ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕೆ ಸಂಭ್ರಮಿಸಲು ಹೋಗಿ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಬಾವಿಯಲ್ಲಿ ಈಜುಲು ಹೋಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೋಣ್ಣವಾಡಿ ಗ್ರಾಮದಲ್ಲಿ ಒಂದು ದುರಂತ ಸಂಭವಿಸಿದೆ.
ಕೋಲಾರ ಜಿಲ್ಲೆಯ ಮುಳ್ಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದ 15 ವರ್ಷದ ಕಿರಣ್ ಮೃತ ದುರ್ದೇವಿ ಎನ್ನಲಾಗಿದೆ. ಎಸ್ ಎಸ್ ಎಲ್ ಸಿ ರಿಸಲ್ಟ್ ಬಂದ ಹಿನ್ನೆಲೆಯಲ್ಲಿ ಕಿರಣ್ ತನ್ನ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ತೆರಳಿದ್ದಾನೆ. ಆಳದ ಬಾವಿಯಲ್ಲಿ ಕಿರಣ್ ಮುಳುಗಿ ಸಾವನಪ್ಪಿದ್ದಾನೆ. ಕಿರಣ್ಗಾಗಿ ಸದ್ಯ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಉದ್ಘಾಟ ನಡೆಸುತ್ತಿದ್ದಾರೆ. ಕುಟುಂಬಸ್ಥರ ಅಕ್ರಂದನ ಇದೀಗ ಮುಗಿಲು ಮುಟ್ಟಿದೆ.








