ದಕ್ಷಿಣಕನ್ನಡ : ರಾಜ್ಯದಲ್ಲಿ ಈಗಾಗಲೇ ಮುಂಗಾರು ಪೂರ್ವ ಭಾರಿ ಮಳೆ ಆಗುತ್ತಿದ್ದು, ಬೆಂಗಳೂರು ಮಹಾನಗರ ಸೇರಿದಂತೆ ಮಲೆನಾಡು ಕರಾವಳಿ ಭಾಗ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಈ ವೇಳೆ ಹಲವು ಕಡೆಗಳಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿದ್ದು ಮಹಾಮಳೆಗೆ ಅನೇಕರು ಬರಿಯಾಗಿದ್ದಾರೆ ಇದೀಗ ದಕ್ಷಿಣ ಕನ್ನಡದಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದು ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ.
ಹೌದು ಮಳೆ ನಡೆಯು ದಕ್ಷಿಣ ಕನ್ನಡದಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಐವರು ಪ್ರವಾಸಿಗರನ್ನು ಇದೀಗ ರಕ್ಷಣೆ ಮಾಡಲಾಗಿದೆ. ಮೂಡುಬಿದಿರೆಯ ಪುತ್ತಿಗೆ ಎರಗುಂಡಿ ಫಾಲ್ಸ್ ಬಳಿ ಈ ಒಂದು ಘಟನೆ ನಡೆದಿದೆ. ದುಮ್ಮಿಕ್ಕಿ ಹರಿಯುತ್ತಿರೋ ಫಾಲ್ಸ್ ಬಳಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಜಲಪಾತದ ಮೇಲ್ಭಾಗದಲ್ಲಿ ಪ್ರವಾಸಿಗರು ಹುಚ್ಚು ಸಾಹಸ ನಡೆಸಿದ್ದಾರೆ. ಈ ವೇಳೆ ಜಲಪಾತದ ಮಧ್ಯದಲ್ಲಿ ಸಿಲುಕಿದ್ದ ಐವರು ಪ್ರವಾಸಿಗರನ್ನು ಸ್ಥಳೀಯರು ಹಗ್ಗ ಕಟ್ಟಿ ರಕ್ಷಣೆ ಮಾಡಿದ್ದಾರೆ.