ದಾವಣಗೆರೆ : ರಂಜಾನ್ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ನಮಾಜ್ ಮಾಡುವುದರಲ್ಲಿ ನಿರತರಾಗಿದ್ದರು. ಈ ವೇಳೆ ಮೂರು ವರ್ಷದ ಬಾಲಕನೊಬ್ಬ ಆಟವಾಡುತ್ತ ಎದುರು ಮನೆಯ ನೀರಿನ ತೊಟ್ಟಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ.
Global Recycling Day 2024: ನೀವು ಮರುಬಳಕೆ ಮಾಡಬಾರದ 9 ವಸ್ತುಗಳು ಹೀಗಿವೆ!
ಅಸದ್ ಅಹಮದ್ (03) ಮೃತ ಬಾಲಕ ಎಂದು ಹೇಳಲಾಗುತ್ತಿದೆ. ರಂಜಾನ್ ಹಿನ್ನೆಲೆ ಮನೆಯಲ್ಲಿ ಎಲ್ಲರೂ ಉಪವಾಸ ಇದ್ದು (ರೋಝಾ) ನಮಾಜ್ ಮಾಡುತ್ತಿದ್ದರು. ಬಳಿಕ ಮನೆ ಒಳಗೆ ಮಗು ಕಾಣದೇ ಇರುವುದನ್ನು ಗಮನಿಸಿ ಊರಿಡಿ ಹುಡುಕಿದ್ದಾರೆ. ಆದರೂ ಮಗು ಪತ್ತೆಯಾಗಿರಲಿಲ್ಲ. ಆಕಸ್ಮಿಕವಾಗಿ ಎದುರು ಮನೆಯಲ್ಲಿ ಪರಿಶೀಲಿಸಿದಾಗ ಮಗು ನೀರಿನ ತೊಟ್ಟಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ.
ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಅನ್ನು ಯಾರು ಬಳಸುತ್ತಿದ್ದಾರೆ? ಬರೀ 1 ನಿಮಿಷದಲ್ಲಿ ಹೀಗೆ ಕಂಡುಹಿಡಿಯಿರಿ!
ಆದರೆ ನೀರಲ್ಲಿ ಬಿದ್ದು ಆಗಲೇ ಎರಡು ಗಂಟೆಗಳು ಕಳೆದಿದ್ದರಿಂದ ಮಗು ಉಸಿರು ಚೆಲ್ಲಿದೆ. ತಕ್ಷಣ ಹತ್ತಿರದ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿಲ್ಲ.ಮೃತ ಬಾಲಕನ ತಾಯಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ತನ್ನ ತವರು ಮನೆಗೆ ಹೆರಿಗೆಗಾಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರು : ಮೂಕ ಪ್ರಾಣಿಯ ಮೇಲೆ ಚಾಲಕನ ಅಮಾನವೀಯ ವರ್ತನೆ :ಕರುವಿನ ಮೇಲೆ ಕಾರು ಹತ್ತಿಸಿ ಕ್ರೌರ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಪೋಷಕರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಸ್ವಾಭಾವಿಕ ಸಾವಿನ ವರದಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಿಪಿಐ ಮುದ್ದುರಾಜ್ ಅವರು ಮಾಹಿತಿ ನೀಡಿದರು.