ಬೆಂಗಳೂರು : ಪ್ರಯಾಣದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಅಂತ ಬೆದರಿಕೆ ಹಾಕಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಬೆದರಿಕೆ ಹಾಕಿದವನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಮೂಲದ ಅಬು ಅಕಿಲ್ ಅಜರ್ ಎಂಬಾತನನ್ನ ಅರೆಸ್ಟ್ ಮಾಡಿದ್ದಾರೆ. ತಪಾಸನೆ ವೇಳೆ ಬಾಂಬ್ ಎಂದು ಬೆದರಿಕೆ ಹಾಕಿದ್ದಾನೆ. ಆರೋಪಿನ ವಶಕ್ಕೆ ಪಡೆದು ಏರ್ಪೋರ್ಟ್ ಸಿಬ್ಬಂದಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನಿಂದ ಅಹ್ಮದಾಬಾದ್ ಗೆ ಅಬು ಅಖಿಲ್ ತೆರಳಲು ಏರ್ ಪೋರ್ಟ್ ಗೆ ಬಂದಿದ್ದ.
ಈ ವೇಳೆ ಎರಡು ಕಡೆ ಬ್ಯಾಗ್ ತಪಾಸಣೆ ಮಾಡಿದ್ದ ಏರ್ಪೋರ್ಟ್ ಸಿಬ್ಬಂದಿ, ಬ್ಯಾಗ್ ಸಂಪೂರ್ಣ ಚೆಕ್ ಮಾಡಿದ್ದಕ್ಕೆ ಅಬು ಅಕಿಲ್ ಆಕ್ರೋಶಗೊಂಡಿದ್ದ . ಆಗ ಬ್ಯಾಗನಲ್ಲಿ ಎರಡು ಚಿಕ್ಕ ಚಿಕ್ಕ ಬಾಂಬ್ ಇದೆ ಅಂತ ಬೆದರಿಕೆ ಹಾಕಿದ್ದಾನೆ ಬೆದರಿಕ ಹಾಕಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








