Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ‘ಕೇಂದ್ರ ಸರ್ಕಾರಿ ನೌಕರ’ರಿಗೆ ಸಿಹಿ ಸುದ್ದಿ: ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ, ಅಧಿಕೃತ ಆದೇಶ | DA Hike

22/04/2026 10:35 PM

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM

BIG NEWS: ಜೈವಿಕ ತಂದೆಯಲ್ಲದಿದ್ದರೇ ಮಗುವಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

22/04/2026 10:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಹಕರೇ ಗಮನಿಸಿ : `ಗ್ಯಾಸ್ ಸಿಲಿಂಡರ್’ ಬುಕ್ ಮಾಡುವ `ಫೋನ್’ ಸ್ವಿಚ್ಚ್ ಆಫ್ ಆಗಿದ್ರೆ ಜಸ್ಟ್ ಹೀಗೆ ಮಾಡಿ !
KARNATAKA

ಗ್ರಾಹಕರೇ ಗಮನಿಸಿ : `ಗ್ಯಾಸ್ ಸಿಲಿಂಡರ್’ ಬುಕ್ ಮಾಡುವ `ಫೋನ್’ ಸ್ವಿಚ್ಚ್ ಆಫ್ ಆಗಿದ್ರೆ ಜಸ್ಟ್ ಹೀಗೆ ಮಾಡಿ !

By kannadanewsnow5713/03/2026 9:09 AM

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ರಾಜಕೀಯ ಅಸ್ಥಿರತೆಯ ಪರಿಣಾಮ ಈಗ ಸಾಮಾನ್ಯ ಜನರ ಅಡುಗೆಮನೆಯ ಮೇಲೆಯೂ ಬೀರುತ್ತಿದೆ. ಸರ್ಕಾರದ ಕಡೆಯಿಂದ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯದ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರು ಮುನ್ನೆಚ್ಚರಿಕಾ ಕ್ರಮವಾಗಿ ಅಡ್ವಾನ್ಸ್ ಎಲ್‌ಪಿಜಿ (LPG) ಬುಕಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ.

ಏಜೆನ್ಸಿಗಳ ಮುಂದೆ ಕ್ಯೂ, ಜಾಮ್ ಆದ ಫೋನ್ ಲೈನ್‌ಗಳು

ಸಾಮಾನ್ಯವಾಗಿ ಜನರು ಫೋನ್ ಕರೆ ಮೂಲಕ ಗ್ಯಾಸ್ ಬುಕ್ ಮಾಡಲು ಇಷ್ಟಪಡುತ್ತಾರೆ. ಆದರೆ ಏಕಾಏಕಿ ಬುಕಿಂಗ್ ಸಂಖ್ಯೆ ಹೆಚ್ಚಾದ ಕಾರಣ ಫೋನ್ ಲೈನ್‌ಗಳು ಸದಾ ಬ್ಯುಸಿ ಬರುತ್ತಿವೆ. ಹಲವೆಡೆ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಉದ್ದನೆಯ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಒಂದು ವೇಳೆ ನಿಮಗೂ ಫೋನ್ ಕರೆ ಮೂಲಕ ಬುಕಿಂಗ್ ಮಾಡಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಡಿಜಿಟಲ್ ಇಂಡಿಯಾದ ಈ ಕಾಲದಲ್ಲಿ ಮಾನವ ಹಸ್ತಕ್ಷೇಪವಿಲ್ಲದೆ ಕ್ಷಣಾರ್ಧದಲ್ಲಿ ಬುಕಿಂಗ್ ಮಾಡಲು ಈ ಕೆಳಗಿನ 4 ದಾರಿಗಳಿವೆ:

ಬುಕಿಂಗ್ ಮಾಡಲು ಇಲ್ಲಿವೆ 4 ಸರಳ ವಿಧಾನಗಳು:

1 ವಾಟ್ಸಾಪ್ (WhatsApp) ಮೂಲಕ ಬುಕಿಂಗ್:

ಇದು ಅತ್ಯಂತ ಸುಲಭದ ದಾರಿ. ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಬುಕಿಂಗ್ ಮಾಡಬಹುದು:

Indane Gas: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7588888824 ಕ್ಕೆ ‘REFILL’ ಎಂದು ಟೈಪ್ ಮಾಡಿ ಕಳುಹಿಸಿ.

HP Gas: 9222201122 ಸಂಖ್ಯೆಗೆ ‘Hi’ ಅಥವಾ ‘Book’ ಎಂದು ಮೆಸೇಜ್ ಮಾಡಿ.

Bharat Gas: ಗ್ರಾಹಕರು 1800224344 ಸಂಖ್ಯೆಗೆ ‘Hi’ ಅಥವಾ ‘Book’ ಎಂದು ಕಳುಹಿಸುವ ಮೂಲಕ ಬುಕಿಂಗ್ ಖಚಿತಪಡಿಸಿಕೊಳ್ಳಬಹುದು.

SMS ಮೂಲಕ ಬುಕಿಂಗ್ (ಇಂಟರ್ನೆಟ್ ಇಲ್ಲದಿದ್ದರೂ ಸಾಧ್ಯ):

2 ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೆ ಸಾಮಾನ್ಯ SMS ಮೂಲಕ ಬುಕ್ ಮಾಡಿ:

Indane Gas: ನಿಮ್ಮ ನಂಬರ್‌ನಿಂದ 7718955555 ಕ್ಕೆ ‘REFILL’ ಎಂದು ಕಳುಹಿಸಿ.

Bharat Gas: ನೋಂದಾಯಿತ ಸಂಖ್ಯೆಯಿಂದ 7715012345 ಅಥವಾ 7718012345 ಕ್ಕೆ ‘LPG’ ಎಂದು ಟೈಪ್ ಮಾಡಿ ಕಳುಹಿಸಿ.

3 ಮಿಸ್ಡ್ ಕಾಲ್ (Missed Call) ಮೂಲಕ:

ಟೈಪಿಂಗ್ ಮಾಡಲು ಇಷ್ಟಪಡದವರಿಗೆ ಅಥವಾ ಹಿರಿಯ ನಾಗರಿಕರಿಗೆ ಇದು ಅತ್ಯುತ್ತಮ ಆಯ್ಕೆ:

Indane Gas: ಗ್ರಾಹಕರು 8454955555 ಕ್ಕೆ ಮಿಸ್ಡ್ ಕಾಲ್ ನೀಡಬಹುದು.

HP Gas: ಗ್ರಾಹಕರು 9493602222 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಆರ್ಡರ್ ಬುಕ್ ಮಾಡಬಹುದು.

4 ಮೊಬೈಲ್ ಆ್ಯಪ್‌ಗಳು ಮತ್ತು ಪೇಮೆಂಟ್ ಗೇಟ್‌ವೇ:

ಸರ್ಕಾರದ UMANG ಆ್ಯಪ್ ಮೂಲಕವೂ ಸೇವೆ ಪಡೆಯಬಹುದು. ಇದಲ್ಲದೆ Paytm, PhonePe, Google Pay ಮತ್ತು Amazon Pay ನಂತಹ ಆ್ಯಪ್‌ಗಳಲ್ಲಿ ‘LPG Booking’ ಆಯ್ಕೆ ಇರುತ್ತದೆ. ಇಲ್ಲಿ ನೀವು ಬುಕಿಂಗ್ ಮಾಡುವುದರ ಜೊತೆಗೆ ಆನ್‌ಲೈನ್ ಪಾವತಿಯನ್ನೂ ಮಾಡಬಹುದು, ಇದರಿಂದ ಸಿಲಿಂಡರ್ ಬಂದಾಗ ಹಣ ನೀಡುವ ಕಿರಿಕಿರಿ ಇರುವುದಿಲ್ಲ.

ಎಚ್ಚರಿಕೆ: ಗ್ಯಾಸ್ ಬುಕಿಂಗ್ ಮಾಡುವಾಗ ಯಾವಾಗಲೂ ಕಂಪನಿಯ ಅಧಿಕೃತ ಸಂಖ್ಯೆಗಳನ್ನೇ ಬಳಸಿ. ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ವದಂತಿಗಳಿಗೆ ಕಿವಿಗೊಟ್ಟು ಪ್ಯಾನಿಕ್ ಬುಕಿಂಗ್ ಮಾಡುವ ಬದಲು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ಸಿಲಿಂಡರ್ ಆರ್ಡರ್ ಮಾಡಿ.

Attention customers: If the 'phone' used to book a 'gas cylinder' is switched off just do this
Share. Facebook Twitter LinkedIn WhatsApp Email

Related Posts

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM2 Mins Read

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ಒಂದು ವರ್ಷದ ಬಳಿಕ ನಟಿ ರನ್ಯಾ ರಾವ್ ಜೈಲಿನಿಂದ ಬಿಡುಗಡೆ

22/04/2026 8:35 PM2 Mins Read

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

22/04/2026 8:28 PM1 Min Read
Recent News

BIG BREAKING: ‘ಕೇಂದ್ರ ಸರ್ಕಾರಿ ನೌಕರ’ರಿಗೆ ಸಿಹಿ ಸುದ್ದಿ: ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ, ಅಧಿಕೃತ ಆದೇಶ | DA Hike

22/04/2026 10:35 PM

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM

BIG NEWS: ಜೈವಿಕ ತಂದೆಯಲ್ಲದಿದ್ದರೇ ಮಗುವಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

22/04/2026 10:03 PM

ಆನ್‌ಲೈನ್ ಗೇಮರ್‌ಗಳಿಗೆ ಶಾಕ್: ಮೇ 1 ರಿಂದ ದೇಶದಲ್ಲಿ ಹೊಸ ಗೇಮಿಂಗ್ ನಿಯಮಗಳು ಜಾರಿ!

22/04/2026 9:57 PM
State News
KARNATAKA

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

By kannadanewsnow0922/04/2026 10:22 PM KARNATAKA 2 Mins Read

ಶಿವಮೊಗ್ಗ: “ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಹಾಗೂ ಸಚಿವ ಸ್ಥಾನದ ಕುರಿತು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ನಡೆಸಿದ ಮಾತುಕತೆ ಅತ್ಯಂತ…

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ಒಂದು ವರ್ಷದ ಬಳಿಕ ನಟಿ ರನ್ಯಾ ರಾವ್ ಜೈಲಿನಿಂದ ಬಿಡುಗಡೆ

22/04/2026 8:35 PM

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

22/04/2026 8:28 PM

ಬಿಸಿಲಿನಿಂದ ಸುರಕ್ಷಿತರಾಗಿರಲು ಈ ಕ್ರಮಗಳನ್ನು ತಪ್ಪದೆ ಅನುಸರಿಸಿ!

22/04/2026 8:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.