ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮಗುಚಿ ಕನಿಷ್ಠ 200 ಪ್ರಯಾಣಿಕರು ನಾಪತ್ತೆಯಾಗಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮಹಿಳೆಯರು ಎಂದು ವರದಿಯಾಗಿದೆ.
“ಶುಕ್ರವಾರ ಮುಂಜಾನೆ, ಸುಮಾರು 200 ಪ್ರಯಾಣಿಕರನ್ನು ಹೊತ್ತ ದೋಣಿ ಕೋಗಿ ರಾಜ್ಯದಿಂದ ನೆರೆಯ ಆಹಾರ ಮಾರುಕಟ್ಟೆಗಾಗಿ ಹೊರಟಿತು. ಈ ಸಮಯದಲ್ಲಿ ನೈಜರ್ ನದಿಯಲ್ಲಿ ದೋಣಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ನಾವು ತೀವ್ರ ಶೋಧ ಕಾರ್ಯಾಚರಣೆಯನ್ನ ಪ್ರಾರಂಭಿಸುತ್ತಿದ್ದೇವೆ” ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನದಿನಲ್ಲಿ ದೋಣಿ ಮಗುಚಲು ಓವರ್ಲೋಡ್ ಕಾರಣವಾಗಿರಬಹುದು.
ಪೋಷಕರೇ, ನಿಮ್ಮ ಮಕ್ಕಳು ‘ಚಹಾ’ ಕುಡಿಯುತ್ತಾರೆಯೇ.? ಹಾಗಿದ್ರೆ, ಈ ವಿಷಯ ನಿಮಗಾಗಿ!
ನೀವೂ ಈ ‘ತಪ್ಪು’ ಮಾಡ್ತಿದ್ದೀರಾ.? ‘ಹಾರ್ಟ್ ಆಟ್ಯಾಕ್’ ಆಗ್ಬೋದು ಎಚ್ಚರ.!
ಸ್ವಾಮೀಜಿಯವರನ್ನು ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ಸಿಡಿದೇಳಲಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ