ಬೆಂಗಳೂರು : ರಾಜ್ಯದಲ್ಲಿ ಬರೋಬ್ಬರಿ 8 ಲಕ್ಷ ಬಿಪಿಎಲ್ ಕಾರ್ಡ್ ರದ್ದಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಡ್ ಇದೀಗ ರದ್ದಾಗುವ ಆಗುವ ಸಾಧ್ಯತೆ ಇದೆ. ಅಕ್ರಮ ಬಿಪಿಎಲ್ ಕಾರ್ಡ್ ಇರುವುದು ಪತ್ತೆಯಾಗಿದೆ.
ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳ ಮೇಲೆ ಇದೀಗ ಹದ್ದಿನ ಕಣ್ಣು ಇಡಲಾಗಿದೆ. ಆಹಾರ ಇಲಾಖೆಯ ವಿಶೇಷ ಕಾರ್ಯಚರಣೆಯಲ್ಲಿ ಇದು ಬಹಿರಂಗವಾಗಿದೆ ಒಟ್ಟು 12,68,097 ಅನುಮಾನಾಸ್ಪದ ರೇಷನ್ ಕಾರ್ಡ್ ಪತ್ತೆಯಾಗಿದೆ. 8 ಲಕ್ಷ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಶೀಘ್ರದಲ್ಲಿ ಆಹಾರ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
19690 ಮಂದಿ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. 25 ಲಕ್ಷಕ್ಕಿಂತ ಅಧಿಕ ವಹಿವಾಟು ಮೀರಿರುವವರು 2684 ಇದ್ದಾರೆ. ಇ- ಕೆ ವೈ ಸಿ ಮಾಡಿಸದೆ ಇರುವವರ ಸಂಖ್ಯೆ 6,16,196 ಇದ್ದಾರೆ 1. 20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು 5,13,613 ಇವೆ. ಅಂತರಾಜ್ಯ ಪಡಿತರ ಚೀಟಿದಾರರು 365 ಇದ್ದು, 7.5 ಎಕರೆಗಿಂತ ಜಾಸ್ತಿ ಭೂಮಿ ಇರುವವರು 33,456 ಕುಟುಂಬ ಇವೆ . ಇನ್ನು ಆರು ತಿಂಗಳಿಂದ ರೇಷನ್ ಪಡೆಯದವರು 19,893 ಕುಟುಂಬಗಳಿವೆ. ಮೃತ ಸದಸ್ಯರ ಹೆಸರಿನಲ್ಲಿ ರೇಷನ್ ಕಾರ್ಡ್ 1146 ಇವೆ. ಸ್ವಂತ ಉಪಯೋಗಕ್ಕಾಗಿ ಸ್ವಂತ ವಾಹನ ಹೊಂದಿರುವವರು 119 ಕುಟುಂಬಗಳಿವೆ. 18 ವರ್ಷ ತುಂಬದ ಏಕ ಸದಸ್ಯ ಪಡಿತರದಾರರು 731 ಇದ್ದಾರೆ ಎಂದು ಆಹಾರ ಇಲಾಖೆ ಬಹಿರಂಗಪಡಿಸಿದೆ.