ಬೆಂಗಳೂರು : ಕೊರೊನದ ಹೊಸ ರೂಪಾಂತರ ತಳಿ ಇದೀಗ ಭಾರತಕ್ಕೆ ಕಾಲಿಟ್ಟಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೆ ಕೊರೊನ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ 85 ವರ್ಷದ ವೃದ್ಧರೊಬ್ಬರು ಸಾವನಪ್ಪಿದ್ದಾರೆ. ಇದೀಗ ಕೋವಿಡ್ ಟೆಸ್ಟಿಂಗ್ ಹೆಚ್ಚಳ ಮಾಡುವಂತೆ ಆರೋಗ್ಯ ಇಲಾಖೆ ಅಭಿಯಾನ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚಳ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಪ್ರತಿನಿತ್ಯ 150 ರಿಂದ 200 ಕೋವಿಡ್ ಟೆಸ್ಟ್ ಗಳನ್ನು ನಿಗಧಿಪಡಿಸಿ, ಟೆಸ್ಟಿಂಗ್ ಸ್ಯಾಂಪಲ್ ನಿಗದಿತ ಲ್ಯಾಬ್ ಗೆ ಕಳುಹಿಸುವಂತೆ ಆರೋಗ್ಯ ಇಲಾಖೆ ಅಭಿಯಾನ ನಿರ್ದೇಶಕರು ಇದೀಗ ಸುತ್ತೋಲೆ ಹೊರಡಿಸಿದ್ದಾರೆ.