ಚಿಕ್ಕಮಗಳೂರು : ನಿನ್ನೆ ಮಂತ್ರಾಲಯ ಸಮೀಪ ಭೀಕರ ಅಪಘಾತ ಸಂಭವಿಸಿದ್ದು ಈ ಒಂದು ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಬಾಲಕಿ ಸಾವನಪ್ಪಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತೇಜಸ್ವಿನಿ (16) ಸಾವನಪ್ಪಿದ್ದಾಳೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ಬಾಲಕಿ ತೇಜಸ್ವಿನಿ ಎಂದು ತಿಳಿದುಬಂದಿದೆ.
ನಿನ್ನೆ ಆಕೆಯ ತಾಯಿ ಲೋಲಾಕ್ಷಿ ಸಾವನಪ್ಪಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ತೇಜಸ್ವಿನಿ ಸಹ ಸಾವನಪ್ಪಿದ್ದಾಳೆ. ಈ ಒಂದು ಭೀಕರ ರಸ್ತೆಪಕದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೊಡೆವೆ ಗ್ರಾಮದ ಇಬ್ಬರು ಬೇಲೂರು ತಾಲೂಕಿನ ಶೆಟ್ಟಿಗೀರಿ ಗ್ರಾಮದ 7 ಜನರು ಸಾವನ್ನಪ್ಪಿದ್ದಾರೆ. ಮಂತ್ರಾಲಯ ತಾಲೂಕಿನ ಕಲ್ಲುದೇವ ಕುಂಟ ಬಳಿ ಒಂದು ಘಟನೆ ನಡೆದಿತ್ತು.








