ಹುಬ್ಬಳ್ಳಿ : ವ್ಯವಸ್ಥೆ ತುಂಬಾ ಕೆಟ್ಟಿದೆ ಸಚಿವರ ಭ್ರಷ್ಟಾಚಾರ ನೋಡಿ ಏನಪ್ಪಾ ಇದು ಅಂತ ಅನಿಸುತ್ತಿದೆ ಹಾಗಾಗಿ ವ್ಯವಸ್ಥೆ ಸುಧಾರಣೆ ಮಾಡಬೇಕಿದೆ ಎಂದು ಸಚಿವರು ಆರ್.ಬಿ ತಿಮ್ಮಪೂರ್ ತಿಳಿಸಿದರು. ಈ ಒಂದು ಹೇಳಿಕೆ ಮೂಲಕ ತಿಮ್ಮಾಪುರ್ ಅವರು ಮಂತ್ರಿಗಳ ಭ್ರಷ್ಟಾಚಾರವನ್ನು ಒಪ್ಪಿಕೊಂಡರಾ? ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯವಸ್ಥೆ ಕೆಟ್ಟಿದೆ ಸುಧಾರಣೆ ಮಾಡಬೇಕಿದೆ. ಸುಧಾರಣೆ ಮಾಡುವ ಕೆಲಸಕ್ಕೆ ನಾನು ಕೈ ಹಾಕಿದ್ದೇನೆ. ಹೀಗಾಗಿ ನಾವು ಹೊಸ ಯೋಜನೆ ತರಬೇಕಾಗಿದೆ. ಮಂಡ್ಯದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಸಚಿವ ಆರ್ ಬಿ ತಿಮಾಪುರ್ ಭ್ರಷ್ಟಾಚಾರ ನಡೆದಿದ್ದನ್ನು ಒಪ್ಪಿಕೊಂಡ್ರಾ ಎನ್ನುವ ಪ್ರಶ್ನೆ ಮೂಡಿದೆ.
ಮಂತ್ರಿಗಳ ಭ್ರಷ್ಟಾಚಾರ ನೋಡಿ ಏನಪ್ಪಾ ಅಂತ ಅನಿಸುತ್ತಿದೆ. ಎಲ್ಲಾ ಮಂತ್ರಿಗಳ ಭ್ರಷ್ಟಾಚಾರ ಇದೆ ವ್ಯವಸ್ಥೆ ಕೆಟ್ಟಿದೆ. ಸುಧಾರಣೆ ಮಾಡಬೇಕಿದೆ ವ್ಯವಸ್ಥೆ ಹಾಗೆ ಇದ್ದರೆ ಟೀಕೆಗಳು ಬರುತ್ತವೆ. ಸುಧಾರಣೆ ಮಾಡುವ ಕೆಲಸಕ್ಕೆ ನಾನು ಕೈ ಹಾಕಿದ್ದೇನೆ ಹೀಗಾಗಿ ಹೊಸ ಹೊಸ ಯೋಜನೆ ತರಬೇಕಿದೆ ಎಂದು ತಿಳಿಸಿದರು.








