ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳಿಂದ ಮಾನವ ಜೀವಕ್ಕಿರುವ ಭೀತಿಯನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ಸಂಸ್ಥೆಗಳು ಮತ್ತು ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ನವೆಂಬರ್ 2025 ರಲ್ಲಿ ನೀಡಿದ್ದ ತನ್ನ ನಿರ್ದೇಶನವನ್ನು ಮಾರ್ಪಡಿಸಲು ನಿರಾಕರಿಸಿರುವ ನ್ಯಾಯಾಲಯ, ಅಗತ್ಯವಿದ್ದರೆ ಹುಚ್ಚು ಹಿಡಿದ ಮತ್ತು ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಬೀದಿ ನಾಯಿಗಳಿಗೆ ದಯಾಮರಣ (Euthanasia) ನೀಡಲು ರಾಜ್ಯ ಸರ್ಕಾರಗಳು ಹಿಂಜರಿಯಬಾರದು ಎಂದು ಕಡಕ್ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ತೀರ್ಪು ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ನ್ಯಾಯಾಂಗವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಕಾನೂನುಬದ್ಧ ಕ್ರಮ ಮತ್ತು ದಯಾಮರಣ:
ಮಾನವ ಜೀವ ಮತ್ತು ಸುರಕ್ಷತೆಗೆ ಎದುರಾಗಿರುವ ಭೀತಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ಹುಚ್ಚು ಹಿಡಿದ, ಗುಣಪಡಿಸಲಾಗದ ಕಾಯಿಲೆ ಇರುವ ಅಥವಾ ಅತ್ಯಂತ ಆಕ್ರಮಣಕಾರಿ/ಅಪಾಯಕಾರಿ ಬೀದಿ ನಾಯಿಗಳ ವಿರುದ್ಧ ದಯಾಮರಣ ಸೇರಿದಂತೆ ಕಾನೂನುಬದ್ಧವಾಗಿ ಅನುಮತಿಸಲಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.”
‘ಬಲಿಷ್ಠರೇ ಉಳಿಯುವ ಸಿದ್ಧಾಂತ’ದ ಆತಂಕ:
“ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣ ಮಕ್ಕಳನ್ನು ನಾಯಿಗಳು ಕಚ್ಚಿ ಕಾಯ್ದಿಟ್ಟಿವೆ, ಹಿರಿಯ ನಾಗರಿಕರ ಮೇಲೆ ದಾಳಿಗಳಾಗಿವೆ ಮತ್ತು ವಿದೇಶಿ ಪ್ರವಾಸಿಗರಿಗೂ ತೊಂದರೆಯಾಗಿದೆ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಡಾರ್ವಿನ್ರ ‘ಬಲಿಷ್ಠರೇ ಉಳಿಯುವ’ (Survival of the Fittest) ಸಿದ್ಧಾಂತ ಇಲ್ಲಿ ಅನ್ವಯವಾಗುತ್ತಿರುವಂತೆ ಕಾಣುತ್ತಿದೆ. ಸರ್ಕಾರದ ಕ್ರಮದ ಕೊರತೆಯಿಂದಾಗಿ ಮಕ್ಕಳು ಮತ್ತು ವೃದ್ಧರನ್ನು ಅವರ ಬದುಕಿಗಾಗಿ ಅವರನ್ನೇ ಹೋರಾಡಲು ಬಿಡಲು ಸಾಧ್ಯವಿಲ್ಲ. ಜನರ ಜೀವ ಮತ್ತು ಸುರಕ್ಷತೆಯನ್ನು ಖಚಿತಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ.”
ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳು:
ದೇಶಾದ್ಯಂತ ಬೀದಿ ನಾಯಿಗಳ ಕಡಿತದ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ ಎಂದು ನ್ಯಾಯಾಲಯದ ಅಂಕಿ-ಅಂಶಗಳು ತಿಳಿಸಿವೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಕೇವಲ ಮೂರು ತಿಂಗಳಲ್ಲಿ 1,483 ಪ್ರಕರಣಗಳು ಮತ್ತು ಉದಯಪುರದಲ್ಲಿ 2026 ರಲ್ಲಿ 1,700 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ತಮಿಳುನಾಡಿನಲ್ಲಿ ಈ ವರ್ಷ 2.4 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಕೇವಲ ಮಾರ್ಚ್ ತಿಂಗಳೊಂದರಲ್ಲೇ 71,000 ಪ್ರಕರಣಗಳು ಮತ್ತು 34 ಸಾವುಗಳು ಸಂಭವಿಸಿವೆ. ಅಷ್ಟೇ ಅಲ್ಲದೆ, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಮತ್ತು ಟರ್ಮಿನಲ್ಗಳಲ್ಲೂ ನಾಯಿಗಳು ಪತ್ತೆಯಾಗಿರುವುದು ಸಾರ್ವಜನಿಕ ಸುರಕ್ಷತೆಯ ಗಂಭೀರ ವೈಫಲ್ಯವನ್ನು ತೋರಿಸುತ್ತದೆ.
ಮೌನ ಪ್ರೇಕ್ಷಕನಾಗಲು ಸಾಧ್ಯವಿಲ್ಲ:
“ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಮಕ್ಕಳು, ಅಂತರಾಷ್ಟ್ರೀಯ ಪ್ರಯಾಣಿಕರು ಮತ್ತು ವೃದ್ಧರು ನಾಯಿ ಕಡಿತಕ್ಕೆ ಬಲಿಯಾಗುತ್ತಿರುವ ಕಠಿಣ ವಾಸ್ತವವನ್ನು ನ್ಯಾಯಾಲಯವು ಕಣ್ಣುಮುಚ್ಚಿ ನೋಡಲು ಸಾಧ್ಯವಿಲ್ಲ. ಮಕ್ಕಳು ಮತ್ತು ವೃದ್ಧರು ಕೇವಲ ತಮ್ಮ ದೈಹಿಕ ಶಕ್ತಿಯ ಬಲದ ಮೇಲೆ ಬದುಕಬೇಕಾದ ಸಮಾಜವನ್ನು ನಮ್ಮ ಸಂವಿಧಾನವು ಕಲ್ಪಿಸಿಲ್ಲ ಎಂದು ಹೇಳಿದೆ.
Supreme Court refuses to modify its November 2025 order to remove stray dogs from public institutions like hospitals, schools, colleges, bus stations, railway stations etc. pic.twitter.com/sG8H975iug
— ANI (@ANI) May 19, 2026








