ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮತ್ತೊಮ್ಮೆ ಸರ್ಜರಿ ಮಾಡಿದ್ದು, 6 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
1 ಡಾ ಷಣ್ಮುಖ ಡಿ
ಕೆ.ಎ.ಎಸ್ (ಸೂಪರ್ ಟೈಂ ಸೈಲ್) ಅಧಿಕಾರಿ ಸ್ಥಳ ನಿರೀಕ್ಷಣೆ
2. ಅಶೋಕ್ ದುಡಗುಂಟಿ
ಕೆ.ಎ.ಎಸ್ (ಸೂಪರ್ ಟೈಂ ಸ್ನೇಲ್) ಅಧಿಕಾರಿ ಸ್ಥಳ ನಿರೀಕ್ಷಣೆ
3 ಮಲ್ಲಿಕಾರ್ಜುನ ಬಿ
ಕೆ.ಎ.ಎಸ್(ಹಿ.ಶ್ರೇ)ಅಧಿಕಾರಿ ವಿಶೇಷ ಭೂಸ್ವಾಧೀನಾಧಿಕಾರಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಬ್ಬಾಳ, ಬೆಂಗಳೂರು
4 ಕೆ ರಂಗನಾಥ
ಕೆ.ಎ.ಎಸ್(ಹಿ.ಶ್ರ) ಅಧಿಕಾರಿ ಆಯುಕ್ತರು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹಂಪಿ, ವಿಜಯನಗರ ಜಿಲ್ಲೆ, ಹೊಸಪೇಟೆ
5 ಶೈಲಜಾ ಎಸ್
ಕೆ.ಎ.ಎಸ್ (ಹಿ.ಶ) ಅಧಿಕಾರಿ ಸ್ಥಳ ನಿರೀಕ್ಷಣೆ
6 ಜಯಲಕ್ಷ್ಮೀ
ಕೆ.ಎ.ಎಸ್(ಹಿ.ಶ್ರೇ) ಅಧಿಕಾರಿ ಕುಲಸಚಿವರು ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡ