ಬೆಂಗಳೂರು : ನಿನ್ನೆ ತಾನೆ ಚಿಕ್ಕಮಗಳೂರಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯ ಮುಗುತಿಗೆ ಸಿಬ್ಬಂದಿಗಳು ಟೇಪ್ ಮತ್ತು ಗಮ್ ಹಚ್ಚಿದ ಘಟನೆ ನಡೆದಿತ್ತು. ಅಲ್ಲದೆ ಕಳೆದ ವರ್ಷ ಕೂಡ ವಿದ್ಯಾರ್ಥಿಗಳಿಗೆ ಶನಿವಾರ ತಗಿಸಿದ ಪ್ರಕರಣ ಬಾರಿ ಸದ್ದು ಮಾಡಿತ್ತು. ಇದೀಗ ಬೆಂಗಳೂರಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತಗಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಸಿಇಟಿ ಪರೀಕ್ಷೆಯಲ್ಲಿ ಸಿಬ್ಬಂದಿಗಳು ಜನಿವಾರ ತೆಗೆಸಿ ಮತ್ತೆ ಎಡವಟ್ಟು ಮಾಡಿದ್ದಾರೆ. ಶನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ಕೂಡ ಸಿಬ್ಬಂದಿಗಳು ಜನಿವಾರ ತೆಗೆಸಿ ಎಡವಟ್ಟು ಮಾಡಿದ್ದಾರೆ. ಬೆಂಗಳೂರಿನ ಮಡಿವಾಳದ ಕೃಪಾ ನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ. ನೆನ್ನೆ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಜನಿವಾರ ಧರಿಸಿ ಬಂದಿದ್ದರು.
ಮೊದಲ ದಿನದ ಸಿಇಟಿ ಪರೀಕ್ಷೆಯಲ್ಲಿ ಸಿಬ್ಬಂದಿಗಳು ಜನಿವಾರ ತೆಗೆಸಿದ್ದಾರೆ. ಜನಿವಾರ ತೆಗಿಯಲ್ಲ ಎಂದಿದಕ್ಕೆ ಮನೆಗೆ ಹೋಗಿ ಅಂತ ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಂದು ಪರೀಕ್ಷಾ ಕೇಂದ್ರದ ಮುಂದೆ ಪೋಷಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಿಇಟಿ ಸೆಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮನವೊಲಿಸಿದ್ದಾರೆ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.








