ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ಮನೆಯಲ್ಲಿದ್ದ 40 ವರ್ಷದ ಒಂಟಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ದರ್ಗಾ ರಸ್ತೆಯಲ್ಲಿನ ಮನೆಯೊಂದರಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ.
ಮನೆಯಲ್ಲಿ ಇದ್ದಂತಹ ಮಹಿಳೆ ಲತಾ ಎನ್ನುವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಲತಾ ಅವರನ್ನು ಹತ್ಯೆಗೈದಿ ದರೋಡೆ ನಡೆಸಲಾಗಿದೆ. ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ದುಷ್ಕರ್ಮಿಗಳು, ಪರಾರಿಯಾಗಿದ್ದಾರೆ.
ಹೋಲ್ಸೇಲ್ ಬಟ್ಟೆ ವ್ಯಾಪಾರಿ ಪ್ರಕಾಶ್ ಎನ್ನುವವರ ಪತ್ನಿ ಲತಾ ಅವರ ಕೊಲೆಯಾಗಿದೆ. ಲತಾ ಅವರನ್ನು ಕೊಲೆಗೈದು ದುಷ್ಕರ್ಮಿಗಳು 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.