ಬೆಂಗಳೂರು : ಇಂದಿಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ 4 ವರ್ಷ ಕಳೆಯಿತು. ಈ ಹಿನ್ನೆಲೆ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜಕುಮಾರ್ ಶಿವರಾಜಕುಮಾರ್ ಸೇರಿದಂತೆ ಕುಟುಂಬ ವರ್ಗದವರು ಪುನೀತ್ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ನಟ ಶಿವರಾಜ್ ಕುಮಾರ್ ಮಾತನಾಡಿ ಪುನೀತ್ ಇಲ್ಲ ಅಂತ ಅಂದುಕೊಂಡರೆ ಕಷ್ಟ ಆಗುತ್ತದೆ. ಅಪ್ಪು ನೆನಪಿನಲ್ಲಿ ಬಾಳಬೇಕು. ನಮ್ಮಲ್ಲಿ ಅವನನ್ನು ತೋರಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಅಪ್ಪು ಇದ್ದಾನೆ ಅಂತ ಅಂದುಕೊಂಡು ಮಾತನಾಡುತ್ತೇನೆ. AI ಮೂಲಕ ಶಿವಣ್ಣ ಪುನೀತ್ ಸಿನಿಮಾ ಮಾಡುವ ವಿಚಾರವಾಗಿ ಐ ನಿಂದ ಸಿನಿಮಾ ಮಾಡುವುದಾದರೆ ಅಚ್ಚು ಕಟ್ಟಾಗಿ ಬರಬೇಕು ಹಾಗಿದ್ದಾಗ ಮಾಡೋಣ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.a








