ಬೆಳಗಾವಿ : ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬೆನ್ನಲ್ಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಇದೀಗ ಪರಿಸ್ಥಿತಿ ಉದ್ವಿಗ್ನವಾಗಿದೆ. ಈ ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ನಿನ್ನೆಯಿಂದ ಕರ್ನಾಟಕಕ್ಕೆ ತಮ್ಮ ಸರ್ಕಾರಿ ಪಾಸ್ ಗಳನ್ನು ಪಡೆದೆ ಬೆಳಗಾವಿಯ ಗಡಿ ಪ್ರದೇಶದಲ್ಲಿ ನಿಲ್ಲಿಸುತ್ತೇವೆ ಆದರೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ರಾಜ್ಯ ಸರ್ಕಾರ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ನಡೆಸುತ್ತಿದೆ. ನಿನ್ನೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತೆ ಬಾಲ ಬಿಚ್ಚಿದ್ದು ಕೆಎಸ್ಆರ್ಟಿಸಿ ಬಸ್ಗೆ ಮಸಿ ಬೆಳೆದು ಪುಂಡಾಟಿಕೆ ಮೆರೆದಿದ್ದಾರೆ.
ಹೌದು ಮಹಾರಾಷ್ಟ್ರದಲ್ಲಿ ಮುಂದುವರಿದ ಶಿವ ಸೇನೆ ಕಾರ್ಯಕರ್ತರ ಪುಂಡಾಟ. ಕೆಎಸ್ಆರ್ಟಿಸಿ ಅಂಬಾರಿ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟೀಕೆ ಮರೆದಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಪುಣೆಯ ಸ್ವರ ಗೇಟ್ ನಲ್ಲಿ ಬಸ್ಗೆ ಮಸಿ ಬಳಿಯಲಾಗಿದೆ. ನಿನ್ನೆ ಪುಣೆಗೆ ತೆರಳಿದ್ದ ಅಂಬಾರಿ ಬಸ್ ಗೆ ವಾಪಸ್ ಬರುವಾಗ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸುವಾಗ ಕೆಎಸ್ಆರ್ಟಿಸಿಯ ಅಂಬಾರಿ ಬಸ್ಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಮಸಿ ಬಳಿದಿದ್ದಾರೆ