ಮುಂಬೈ : ಹಿಂದಿ ಬಿಗ್ ಬಾಸ್ 13 ರ ಮೂಲಕ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಅವರು 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಇಡೀ ಬಣ್ಣದ ಲೋಕವನ್ನು ದಿಗ್ಭ್ರಮೆಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಎಟ್ಯಾಕ್ ಎನ್ನುವುದು ಚಿಕ್ಕ ವಯಸ್ಸಿನವರನ್ನೇ ಬಲಿ ಪಡೆಯುತ್ತಿರುವುದು ಆಘಾತ ತರುತ್ತಿರುವ ನಡುವೆಯೇ, ಇದೀಗ ಇನ್ನೊಂದು ಅಚ್ಚರಿಯ ಸಂಗತಿಯೂ ಹೊರಬಂದಿದೆ.
ಹೌದು ನಟಿ ಶೆಫಾಲಿ ಮೃತಪಟ್ಟಿದ್ದು ಹೃದಯಘಾತದಿಂದಾನ? ಎಂದು ತೀವ್ರ ಚರ್ಚೆಗೆ ಇದೀಗ ಹುಟ್ಟು ಹಾಕಿದೆ. ಶೆಫಾಲಿ ಜರಿವಾಲಾ ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ ಎಂದು ಸಾವಿನ ಬಗ್ಗೆ ಮುಂಬೈ ಪೊಲೀಸ್ರು ಶಾಕಿಂಗ್ ಮಾಹಿತಿ ನೀಡಿದ್ದಾರೆ. ಅಂಧೇರಿಯ ನಿವಾಸದಲ್ಲಿ ಶೆಫಾಲಿ ಅವರ ಪತ್ತೆಯಾಗಿದೆ ಮುಂಬೈ ಪೋಲಿಸರಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ತಿಳಿದು ಬಂದಿದೆ. ಶೆಫಾಲಿ ಅವರ ಮೃತದೇಹವನ್ನು ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಹಾಗಾಗಿ ನಿಗೂಢ ಸಾವಿನ ತಣಿಕೆಗೆ ಇಳಿದ ಪೊಲೀಸರು ಶೆಫಾಲಿ ಮನೆಯ ಅಡುಗೆ ಸಿಬ್ಬಂದಿಗಳನ್ನು ತೀವ್ರ ವಿತರಣೆಗೆ ಒಳಪಡಿಸಿದ್ದಾರೆ. ಹಲವು ಪ್ರಶ್ನೆಗಳನ್ನು ಪೊಲೀಸರು ಅಡುಗೆ ಸಿಬ್ಬಂದಿಗಳಿಗೆ ಕೇಳಿದ್ದಾರೆ ಶೆಫಾಲಿ ಸಾವಿನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದೆ.ಇಬ್ಬರು ನೌಕರರು ಭದ್ರತಾ ಸಿಬ್ಬಂದಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಶೆಫಾಲಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು ಎಂದು ಪೊಲೀಸರಿಗೆ ಪತಿ ಪರಾಗ್ ತ್ಯಾಗಿ ಮಾಹಿತಿ ನೀಡಿದ್ದಾರೆ.