ರಾಯಚೂರು : ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಇಂದು ಭದ್ರತಾ ವೈಫಲ್ಯ ಕಂಡುಬಂದಿತು. ಲ್ಯಾಂಡ್ ಆಗಬೇಕಿದ್ದ ಹೆಲಿಕ್ಯಾಪ್ಟರ್ ಒಂದು ಹೆಲಿಪ್ಯಾಡ್ ನಲ್ಲಿ, ಆದರೆ ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗಿದೆ ಮತ್ತೊಂದು ಹೆಲ್ಪ್ಯಾಡ್ನಲ್ಲಿ.
ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರುನಲ್ಲಿ ಈ ಒಂದು ಘಟನೆ ನಡೆದಿದೆ. ದಿಡೀರ್ ಗೊಂದಲದಿಂದ ಅಧಿಕಾರಿಗಳು ತಬ್ಬಿಬಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರೆಡ್ಡಿ ಸಹ ಇದ್ದರು. ಇಂದು ಲಿಂಗಸುಗೂರಿನ ಹಿರಿಯ ಕಾಂಗ್ರೆಸ್ ಮುಖಂಡ ಅಮರೇಗೌಡ ಬಯ್ಯಾಪುರ ಅವರ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಿಎಂ ಹಾಗೂ ಡಿಸಿಎಂಗಾಗಿ ಎರಡು ಪ್ರತ್ಯೇಕ ಹೆಲಿಪಾಡ್ ನಿರ್ಮಾಣ ಮಾಡಲಾಗಿತ್ತು. ಅವರಿರುವ ಪ್ರೋಟೋಕಾಲ್ ಸಂಬಂಧಪಟ್ಟಂತೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಇನ್ನು ಕಲಬುರ್ಗಿಯಲ್ಲಿ ಮತ್ತೊಂದು ಹೆಲಿಪ್ಯಾಡ್ ಇದ್ದು ಅಲ್ಲಿ ಸತೀಶ್ ಜಾರಕಿಹೊಳಿಯವರು ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಇದರಲ್ಲಿ ಅದಲು ಬದಲು ಲ್ಯಾಂಡಿಂಗ್ ಆಯ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.








