ನವದೆಹಲಿ : ಪರಿಶಿಷ್ಟ ಜಾತಿ (SC) ಕೋಟಾದ ಉಪ ವರ್ಗೀಕರಣಕ್ಕೆ ಅನುಮತಿ ನೀಡುವ ತನ್ನ ಹಿಂದಿನ ನಿರ್ಧಾರದ ವಿರುದ್ಧ ಹಲವಾರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
“ಮರುಪರಿಶೀಲನಾ ಅರ್ಜಿಗಳನ್ನ ಪರಿಶೀಲಿಸಿದ ನಂತರ, ದಾಖಲೆಯ ಮೇಲ್ನೋಟಕ್ಕೆ ಯಾವುದೇ ದೋಷ ಕಂಡುಬಂದಿಲ್ಲ. ಮರುಪರಿಶೀಲನೆಗೆ ಯಾವುದೇ ಕಾರಣವಿಲ್ಲ. ಆದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಂದ್ಹಾಗೆ, ಆಗಸ್ಟ್ 1ರಂದು, ಸಿಜೆಐ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು 6:1 ಬಹುಮತದಿಂದ, ರಾಜ್ಯಗಳು ಎಸ್ಸಿ / ಎಸ್ಟಿ ವರ್ಗಗಳಲ್ಲಿ ಹೆಚ್ಚು ಹಿಂದುಳಿದವರನ್ನ ಗುರುತಿಸಬಹುದು ಮತ್ತು ಕೋಟಾದೊಳಗೆ ಪ್ರತ್ಯೇಕ ಕೋಟಾಗಳನ್ನ ನೀಡಲು ಅವರನ್ನು ಉಪ ವರ್ಗೀಕರಿಸಬಹುದು ಎಂದು ಅಭಿಪ್ರಾಯಪಟ್ಟಿತ್ತು.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ನಡುವೆ ಸಂಭಾವ್ಯ ಅಪಾಯಗಳ ಕುರಿತು ‘CCS’ ಜೊತೆ ‘ಪ್ರಧಾನಿ ಮೋದಿ’ ಸಭೆ
BREAKING ; ಜೈಪುರ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ಸ್ಥಳಕ್ಕೆ ‘ಬಾಂಬ್ ನಿಷ್ಕ್ರಿಯ ದಳ’ ದೌಡು
ವಿಯೆಟ್ನಾಂ ಮೃಗಾಲಯದಲ್ಲಿ ‘ಹಕ್ಕಿ ಜ್ವರ’ದಿಂದ ’47 ಹುಲಿ, 3 ಸಿಂಹ, ಒಂದು ಚಿರತೆ’ ಸಾವು