ಬೆಂಗಳೂರು : ಬೆಂಗಳೂರಿನಲ್ಲಿ ರೌಡಿ ಫಿಲ್ಟರ್ ಒಬ್ಬ ಯುವಕನನ್ನು ಬೆತ್ತಲೆಗೊಳಿಸಿ ನಗ್ನವಾಗಿ ರಸ್ತೆ ಮೇಲೆ ಓಡುವಂತೆ ಹಲ್ಲೆ ನಡೆಸಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಿನ ರಾಜಗೋಪಾಲನಗರದ ರೌಡಿಶೀಟರ್ ನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪ್ರಾಣ ಉಳಿಸಿಕೊಳ್ಳಲು ಬೆತ್ತಲೆಯಾಗಿ ಓಡಿದ ಯುವಕ ರಾಜಗೋಪಾಲನಗರದ ಯುವಕ ಅರ್ಜುನ್ ಎನ್ನುವ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
ಬಟ್ಟೆಯನ್ನು ಬಿಚ್ಚಿಸಿ ನಗ್ನಗೊಳಿಸಿ ಓಡುವಂತೆ ಹೇಳಿದ್ದ ರೌಡಿ ಪವನ್ ಯುವಕನನ್ನು ಬೆತ್ತಲೆ ಮಾಡಿ ರೌಡಿ ಯಿಂದ ಹಲ್ಲೆ ನಡೆಸಿದ್ದಾನೆ. ನಡು ರಸ್ತೆಯಲ್ಲಿ ಯುವಕನನ್ನು ಬೆತ್ತಲೆ ಮಾಡಿ ರೌಡಿಯಿಂದ ಹಲ್ಲೆ ನಡೆಸಲಾಗಿದೆ.ಬಟ್ಟೆ ಬಿಚ್ಚಿಸಿ ನಗ್ನವಾಗಿ ಓಡುವಂತೆ ರೌಡಿ ಪವನ್ ಹೇಳಿದ್ದ ಎನ್ನಲಾಗಿದ್ದು, ಬೇರೊಂದು ಕೇಸ್ ತನಿಖೆ ವೇಳೆ ಈ ವಿಡಿಯೋ ಬಹಿರಂಗವಾಗಿದೆ.
ಪ್ರಕರಣದ ಕುರಿತು ಡಿಸಿಪಿ ಗಿರೀಶ್ ಅವರು ಪ್ರತಿಕ್ರಿಯೆ ನೀಡಿದ್ದು, ಹಲ್ಲೆಗೆ ಒಳಗಾದಂತಹ ಯುವಕನನ್ನು ಅರ್ಜುನ್ ಎಂದು ಹೇಳಲಾಗುತ್ತಿದೆ. ಬೇರೆ ಕೇಸ್ ನಲ್ಲಿ ರೌಡಿ ಶೀಟರ್ ಪವನ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಕಳೆದ ಒಂದು ತಿಂಗಳ ಹಿಂದೆ ನಡೆದಂತ ಈ ಒಂದು ಹಲ್ಲೆ ಇದೀಗ ವಿಚಾರಣೆ ಬಹಿರಂಗವಾಗಿದೆ ಎಂದು ಮಾಹಿತಿ ನೀಡಿದರು