ವಿಜಯಪುರ : ವಿಜಯಪುರದಲ್ಲಿ ರೆಡ್ ಬರ್ಡ್ ಜೆಟ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಖಾಸಗಿ ಜೆಟ್ ಪತನವಾಗಿ ಇಬ್ಬರಿಗೆ ಗಂಭೀರವಾಗಿ ಗಯಗಳಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ.
ರೆಡ್ ಬರ್ಡ್ ಜೆಟ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು ತಕ್ಷಣ ೧೦೮ ಆಂಬುಲೆನ್ಸ್ ಗೆ ಕರೆ ಮಾಡಿದ್ದು ಆ ಮೂಲಕ ಗಾಯಲುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಮಂಗಳೂರು ಗ್ರಾಮದ ಬಳಿ ಇಂದು ರೆಡ್ ಬರ್ಡ್ ಖಾಸಗಿ ಜೆಟ್ ಪತನವಾಗಿದೆ. ಸ್ಥಳಕ್ಕೆ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.








