ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಡೆಪ್ಯುಟಿ ಗವರ್ನರ್ ಎಂ ರಾಜೇಶ್ವರ್ ರಾವ್ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ 2024 ರ ಅಕ್ಟೋಬರ್ 9 ರಿಂದ ಜಾರಿಗೆ ಬರುವಂತೆ ಇನ್ನೂ ಒಂದು ವರ್ಷ ವಿಸ್ತರಿಸಿದೆ.
ಅಕ್ಟೋಬರ್ 9, 2024 ರಿಂದ ಜಾರಿಗೆ ಬರುವಂತೆ ಅಥವಾ ಮುಂದಿನ ಆದೇಶದವರೆಗೆ ರಾವ್ ಅವರನ್ನು ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಿ ನೇತೃತ್ವದ ಕ್ಯಾಬಿನೆಟ್ನ ನೇಮಕಾತಿ ಸಮಿತಿ ಅಧಿಸೂಚನೆಯಲ್ಲಿ ತಿಳಿಸಿದೆ.
ರಾವ್ ಅವರ ಎರಡನೇ ಒಂದು ವರ್ಷದ ವಿಸ್ತರಣೆ ಇದಾಗಿದೆ. ಈ ಹಿಂದೆ, ಆರ್ಬಿಐನ ಡೆಪ್ಯುಟಿ ಗವರ್ನರ್ ಆಗಿ ಅವರ ಅಧಿಕಾರಾವಧಿಯನ್ನು ಸರ್ಕಾರವು ಅಕ್ಟೋಬರ್ 9, 2023 ರಿಂದ ಜಾರಿಗೆ ಬರುವಂತೆ ಒಂದು ವರ್ಷ ವಿಸ್ತರಿಸಿತ್ತು.
ರಾವ್ ಅವರನ್ನು ಅಕ್ಟೋಬರ್ 2020 ರಲ್ಲಿ ಮೂರು ವರ್ಷಗಳ ಅವಧಿಗೆ ಆರ್ಬಿಐನ ಡೆಪ್ಯುಟಿ ಗವರ್ನರ್ ಆಗಿ ನೇಮಿಸಲಾಯಿತು.
ಏತನ್ಮಧ್ಯೆ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ 2024 ರ ಡಿಸೆಂಬರ್ನಲ್ಲಿ ಕೊನೆಗೊಳ್ಳಲಿದ್ದು, ಡೆಪ್ಯುಟಿ ಗವರ್ನರ್ ಮೈಕೆಲ್ ಪಾತ್ರಾ ಅವರ ಅಧಿಕಾರಾವಧಿ 2025 ರ ಜನವರಿಯಲ್ಲಿ ಕೊನೆಗೊಳ್ಳಲಿದೆ. ಸರ್ಕಾರವು ಅವರ ಅವಧಿಯನ್ನ ಮತ್ತೊಮ್ಮೆ ವಿಸ್ತರಿಸುತ್ತದೆಯೇ ಎಂದು ನೋಡಬೇಕಾಗಿದೆ. ಈ ಹಿಂದೆ, ದಾಸ್ ಅವರ ಅಧಿಕಾರಾವಧಿಯನ್ನು ಡಿಸೆಂಬರ್ 2024 ರವರೆಗೆ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿತ್ತು. ಏತನ್ಮಧ್ಯೆ, ಪಾತ್ರಾ ಕಳೆದ ವರ್ಷ ಎರಡನೇ ಬಾರಿಗೆ ಒಂದು ವರ್ಷದ ವಿಸ್ತರಣೆಯನ್ನ ಪಡೆದರು.
ಈ ಕುಮಾರಸ್ವಾಮಿ ಹೆದರುವುದು ದೇವರಿಗೆ, ಈ ನಾಡಿನ ಜನರಿಗೆ ಮಾತ್ರ, ಸಿದ್ದರಾಮಯ್ಯಗೆ ಅಲ್ಲ: HDK
ಈ ಕುಮಾರಸ್ವಾಮಿ ಹೆದರುವುದು ದೇವರಿಗೆ, ಈ ನಾಡಿನ ಜನರಿಗೆ ಮಾತ್ರ, ಸಿದ್ದರಾಮಯ್ಯಗೆ ಅಲ್ಲ: HDK
ಪ್ರತಿದಿನ ರಾತ್ರಿ ಒಂದು ‘ಲವಂಗ’ ತಿಂದ್ರೆ ಏನಾಗುತ್ತೆ ಗೊತ್ತಾ.? ‘ಅದ್ಭುತ’ ಪ್ರಯೋಜನ