ತುಮಕೂರು : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಕಾರು ಅಪಘಾತಕ್ಕೆ ಈಡಾಗಿದೆ.ಆದರೆ ಈ ಒಂದು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಇಂದು ಶ್ರೇಯಸ್ ನಟಿಸಿರುವ ವಿಷ್ಣುಪ್ರಿಯಾ ಚಲನಚಿತ್ರದ ಪ್ರಮೋಷನ್ ಗೆ ದಾವಣಗೆರೆಗೆ ತೆರಳುತ್ತಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಕಾರುಬಿಎಂಡಬ್ಲ್ಯು ಕಾರು ಅಪಘಾತಕ್ಕೆ ಒಳಗಾಗಿದೆ. ತುಮಕೂರಿನ ಶಿರಾ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ಆದರೆ, ಈ ಕಾರು ಆಕ್ಸಿಡೆಂಟ್‌ನಿಂದ ನಟ ಶ್ರೇಯಸ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಓವರ್ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಇದ್ದ ಕಾರಿಗೆ ಗುದ್ದಿಕೊಂಡ ಹೋಗಿದೆ ಅನ್ನೋ ಮಾಹಿತಿ ಇದೆ. ಸಿನಿಮಾ ಪ್ರಮೋಶನ್‌ಗೆ ಹೋಗುತ್ತಿದ್ದ ನಟ ಶ್ರೇಯಸ್ ಈ ಒಂದು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಜೊತೆಯಲ್ಲಿರುವವರು ಘಟನೆಯಿಂದ ಶಾಕ್ ಗೆ ಒಳಗಾಗಿದ್ದಾರೆ.