ಮಂಡ್ಯ : ಮಂಡ್ಯದ ಆದಿಚುಂಚನ ಗಿರಿಯ ಮಠಕ್ಕೆ ಬೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಲಭೈರವೇಶ್ವರನಿಗೆ ವಿಶೇಷವಾದ ಪೂಜೆ ಸಲ್ಲಿಸಿದರು. ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಮೋದಿ ಸೀದಾ ಆದಿಚುಂಚನಗಿರಿ ಮಠಕ್ಕೆ ಬಂದಿಳಿದ ಮೋದಿ ಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಕಾಲಭೈರವೇಶ್ವರನಿಗೆ ನಮಸ್ಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಆದಿಚುಂಚನಗಿರಿಯತ್ತ ಪ್ರಯಾಣ ಬೆಳೆಸಿದ್ದು, ಅವರು ಸೇನಾ ಹೆಲಿಕ್ಯಾಪ್ಟರ್ ಮೂಲಕ ಆದಿಚುಂಚನಗಿರಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಭದ್ರತಾ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣದಿಂದ ಹೆಲಿಪ್ಯಾಡ್ ವರೆಗೆ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಇರಿಸಲಾಗಿತ್ತು.
ಆದಿಚುಂಚನಗಿರಿಯ ಮಠಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರು ಈಗಾಗಲೇ ಕಾಲಭೈರವನಿಗೆ ಪೂಜೆ ಸಲ್ಲಿಸಿದ್ದಾರೆ. ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪೀಠದ 71ನೇ ಯತಿ ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆಯುಳ್ಳ ಗುರು ಭೈರವೈಕ್ಯ ಮಂದಿರವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಮಂದಿರದ ಉದ್ಘಾಟನೆಗೆ ಪ್ರಧಾನಿಗಳ ಭಾಗವಹಿಸುವಿಕೆ ಮಠದ ಭಕ್ತರು ಹಾಗೂ ಗುರುಪರಂಪರೆಯ ಅಭಿಮಾನಿಗಳಲ್ಲಿ ವಿಶೇಷ ಉತ್ಸಾಹವನ್ನು ಉಂಟುಮಾಡಿದೆ.








