ಬೆಂಗಳೂರು : 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗಲೇ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲಕ್ಕೆ ಬಿದ್ದಿದ್ದಾರೆ. ಕೆಪಿ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು ಇದೀಗ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾರೆ. ಚೀಟಿ ವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವ್ಯಕ್ತಿಯನ್ನು ಕೇಸ್ನಲ್ಲಿ ಸೇರಿಸುವುದಾಗಿ ಬೆದರಿಸಿದ್ದಾರೆ ಮೈಸೂರು ರಸ್ತೆಯ ಸಿಎಆರ್ ಗ್ರೌಂಡ್ ಬಳಿ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ.
ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಪೊಲೀಸರು ಆಪರೇಷನ್ ನಡೆಸಿದ್ದರು. ಈ ವೇಳೆ ಫ್ಲಾಟ್ ನಲ್ಲಿ ಆರೋಪಿಗಳು ಪ್ರತಿರೋಧ ತೋರಿದ್ದರು. ಪೊಲೀಸರು ಮನೆಗೆ ಬರುವ ಸಿಸಿಟಿವಿ ಮತ್ತು ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ನೋಟಿಸ್ ಕೊಡದೆ ಬಂದಿದ್ದೀರಾ ಅಂತ ಆರೋಪಿಗಳು ಪ್ರಶ್ನೆ ಮಾಡಿದ್ದಾರೆ ನಾವು ಲಾಯರ್ ಬಳಿ ಮಾತನಾಡುತ್ತೇವೆ ಅಂತ ಗಲಾಟೆ ಮಾಡಿದ್ದಾರೆ. ಬಳಿಕ ಆರೋಪಿಗಳನ್ನ ಠಾಣೆಗೆ ಕರೆದುಕೊಂಡು ಹೋದ ಮೇಲೆ ಮೇಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೀಲ್ ನಡೆಯುತ್ತದೆ.
ಕೇಸ್ ಇಂದ ಕೈ ಬಿಡಲು ಬರೋಬ್ಬರಿ 5 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮೊದಲು ಇನ್ಸ್ಪೆಕ್ಟರ್ ಗೋವಿಂದರಾಜು ಒಂದು ಲಕ್ಷ ಪಡೆದಿದ್ದು ಅದಾದ ಬಳಿಕ 4 ಲಕ್ಷ ತರುವಂತೆ ಡಿಮ್ಯಾಂಡ್ ಮಾಡಿದ್ದಾರೆ ನಾಲ್ಕು ಲಕ್ಷ ಹಣ ಪಡೆಯುತ್ತಿದ್ದಾಗ ಇನ್ಸ್ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಗೋವಿಂದರಾಜು ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ .








