Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM

ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ದಿಢೀರ್ ಅಸ್ವಸ್ಥ: ಮನೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನಾಯಕ ಆಸ್ಪತ್ರೆಗೆ ದಾಖಲು

01/05/2026 9:00 PM

ಸಣ್ಣ ಗಾಯವಾದರೂ ರಕ್ತ ನಿಲ್ಲುತ್ತಿಲ್ಲವೇ? ನಿರ್ಲಕ್ಷಿಸಬೇಡಿ, ಇದು ‘ಹಿಮೋಫಿಲಿಯಾ’ ಲಕ್ಷಣವಿರಬಹುದು!

01/05/2026 8:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸ್ವಲ್ಪ ಯಾಮಾರಿದ್ರು ಪೋಲೀಸರ ಹೆಣ ಬೀಳುತ್ತಿದ್ದವು : ‘FIR’ ನಲ್ಲಿ ದಾಖಲಾದ ಸ್ಪೋಟಕ ಅಂಶ ಬಯಲು!
KARNATAKA

BREAKING : ಸ್ವಲ್ಪ ಯಾಮಾರಿದ್ರು ಪೋಲೀಸರ ಹೆಣ ಬೀಳುತ್ತಿದ್ದವು : ‘FIR’ ನಲ್ಲಿ ದಾಖಲಾದ ಸ್ಪೋಟಕ ಅಂಶ ಬಯಲು!

By kannadanewsnow0513/02/2025 7:25 AM

ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಿಡಿಗೇಡಿಗಳಿಂದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ FIR ದಾಖಲಾಗಿದ್ದು ಈಗಾಗಲೇ ಪೊಲೀಸರು 12 ಜನ ಆರೋಪಿ ಹಾಗೂ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಜಡ್ಜ್ ಮುಂದೆ ಹಾಜರುಪಡಿಸಿದಾಗ 14 ದಿನಗಳ ಕಾಲ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ನಲ್ಲಿ ಹಲವು ಅಂಶಗಳು ದಾಖಲಾಗಿದ್ದು, ಕೆಲವು ಸ್ಫೋಟಕವಾದ ಅಂಶಗಳು ಇದೀಗ ಬಯಲಾಗಿವೆ. ಉದ್ರಿಕ್ತರು ಸಿಕ್ಕ ಸಿಕ್ಕ ಪೊಲೀಸರ ಮೇಲೆ ಹಾಗೂ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ವಲ್ಪ ಯಾಮಾರಿದರೂ ಕೂಡ ಪೊಲೀಸರ ಹೆಣ ಬೀಳುತ್ತಿದ್ದವು. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಾರೆ. ಈ ವೇಳೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನಗಳಿಗೂ ಕೂಡ ಉದ್ರಿಕ್ತರು ಹಾನಿ ಮಾಡಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದು ಹಲ್ಲೆ ನಡೆಸಿದ್ದಾರೆ ಸರ್ಕಾರಿ ಕೆಲಸಕ್ಕೆ ಮುಸ್ಲಿಂ ಯುವಕರು ಅಡ್ಡಿಪಡಿಸಿದ್ದಾರೆ. ಎಂದು ಉದಯಗಿರಿ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ ಕಲ್ಲುತೂರಾಟ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಕೆಯಾಗಿದೆ. ಉದಯಗಿರಿ ಪೊಲೀಸ್ ಠಾಣೆ ಪಿಎಸ್ಐ ಸುನಿಲ್ ಈ ಕುರಿತು ದೂರು ದಾಖಲಿಸಿದ್ದಾರೆ.

ಏನಿದು ಘಟನೆ?

ಮುಸ್ಲಿಂ ಸಮುದಾಯದ ಬಗ್ಗೆ ವ್ಯಕ್ತಿವೋರ್ವ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎಂಬ ಕಾರಣಕ್ಕಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅರವಿಂದ ಕೇಜಿವಾಲ್ ಅವರ ಭಾವಚಿತ್ರವನ್ನು ಹಾಕಿ ಅದರ ಮೇಲೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತ ಸಾಲುಗಳನ್ನು ಉಲ್ಲೇಖ ಮಾಡಿದ್ದ. ಇದರ ಜೊತೆಗೆ ಮಹಾತ್ಮಾಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರ ಕುರಿತ ಅವಹೇಳನಕಾರಿ ವೀಡಿಯೋ ಪೋಸ್ಟ್ ಮಾಡಿದ್ದ ಎಂದು ಆರೋಪಿಸಲಾಗಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ಪ್ರಮುಖರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದ್ದರು. ಆತನ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೂಡಲೇ ಆತನನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದರು. ಇದಲ್ಲದೆ ಶಾಂತಿನಗರ, ಮಹದೇವಪುರ ರಸ್ತೆ ಬಂದ್ ಮಾಡಿದ್ದರು.

ಮಧ್ಯರಾತ್ರಿಯಾದರೂ ಸನ್ನಿವೇಶ ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ನಡುವೆ ಕೆಲವರು ಕಲ್ಲು ತೂರಾಟ ನಡೆಸಿದಾಗ ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM3 Mins Read

ಮೇ.16ರಿಂದ ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯಲ್ಲಿ ‘ನನ್ನ ಇ-ಖಾತೆ’ ಆಂದೋಲನ: ಡಿಸಿಎಂ‌ ಡಿ.ಕೆ ಶಿವಕುಮಾರ್

01/05/2026 8:26 PM4 Mins Read

‘HIV ಪರೀಕ್ಷೆ’ಗೆ ಮುಜುಗರವೇ? ಈಗ ‘ಕ್ಯೂಆರ್ ಕೋಡ್’ ಮೂಲಕ ಸಿಗಲಿದೆ ಪರಿಹಾರ, ಜಸ್ಟ್ ಹೀಗೆ ಮಾಡಿ ಸಾಕು

01/05/2026 8:24 PM2 Mins Read
Recent News

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM

ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ದಿಢೀರ್ ಅಸ್ವಸ್ಥ: ಮನೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನಾಯಕ ಆಸ್ಪತ್ರೆಗೆ ದಾಖಲು

01/05/2026 9:00 PM

ಸಣ್ಣ ಗಾಯವಾದರೂ ರಕ್ತ ನಿಲ್ಲುತ್ತಿಲ್ಲವೇ? ನಿರ್ಲಕ್ಷಿಸಬೇಡಿ, ಇದು ‘ಹಿಮೋಫಿಲಿಯಾ’ ಲಕ್ಷಣವಿರಬಹುದು!

01/05/2026 8:51 PM

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ? ಶಾಕಿಂಗ್ ವರದಿ ಇಲ್ಲಿದೆ!

01/05/2026 8:43 PM
State News
KARNATAKA

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

By kannadanewsnow0901/05/2026 10:14 PM KARNATAKA 3 Mins Read

ಶಿವಮೊಗ್ಗ: ಇಂದು ಸಾಗರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಸದ್ಗುರು ವರ್ಸಸ್ ಸ್ವಾಭಿಮಾನಿ ಶಿಕ್ಷಕರ…

ಮೇ.16ರಿಂದ ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯಲ್ಲಿ ‘ನನ್ನ ಇ-ಖಾತೆ’ ಆಂದೋಲನ: ಡಿಸಿಎಂ‌ ಡಿ.ಕೆ ಶಿವಕುಮಾರ್

01/05/2026 8:26 PM

‘HIV ಪರೀಕ್ಷೆ’ಗೆ ಮುಜುಗರವೇ? ಈಗ ‘ಕ್ಯೂಆರ್ ಕೋಡ್’ ಮೂಲಕ ಸಿಗಲಿದೆ ಪರಿಹಾರ, ಜಸ್ಟ್ ಹೀಗೆ ಮಾಡಿ ಸಾಕು

01/05/2026 8:24 PM

ಬೆಂಗಳೂರು ಜನತೆ ಗಮನಕ್ಕೆ: ಮೇ.16ರಿಂದ ಪ್ರತಿ ಶನಿವಾರ ‘ನನ್ನ ಇ-ಖಾತಾ ಅಭಿಯಾನ’ ಆರಂಭ

01/05/2026 8:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.