ಬೆಂಗಳೂರು : ವೈಫೈ ಯೂಸರ್ ನೇಮ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ವಿರೋಧಿ ಯೂಸರ್ ನೇಮ್ ಬಳಕೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳುನಲ್ಲಿ ಮೊಬೈಲ್ ವೈಫ್ ಆನ್ ಮಾಡಿದ್ರೆ ಪಾಕಿಸ್ತಾನ್ ಜಿಂದಾಬಾದ್ ಎಂದು ದೇಶದ್ರೋಹಿ ಯೂಸರ್ ನೇಮ್ ತೋರಿಸುತ್ತಿದೆ.
ಗ್ರಾಮದಲ್ಲಿ ದೇಶ ವಿರೋಧಿ ಭಯೋತ್ಪಾದಕ ಶಕ್ತಿ ಇದೆ ಎಂದು ಶಂಕಿಸಲಾಗಿದ್ದು, ಜಿಗಣಿ ಪೊಲೀಸ್ ಠಾಣೆಗೆ ಭಜರಂಗದಳ ಕಾರ್ಯಕರ್ತರು ದೂರು ನೀಡಿದ್ದಾರೆ. ಎನ್ ಸಿಆರ್ ದಾಖಲಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.








