ನವದೆಹಲಿ : ಪೆಹಲ್ಗಾಮ್ ಉಗ್ರರ ದಾಳಿಯ ಪ್ರತಿಕಾರಕ್ಕೆ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ಎಲ್ಲಾ ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪಾಕಿಸ್ತಾನ ಬೆದರಿದೆ. ಇದಕ್ಕೆ ಪೂಕರವೆಂಬಂತೆ ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ ಶಾಂತಿ ಪಠಣ ಮಾಡಿದ್ದಾರೆ.
ಉಗ್ರದ ನೆಲೆ ಗುರಿಯಾಗಿಸಿ ಏರ್ಸ್ಟ್ರೈಕ್ ಮಾಡಿದ ನಂತರ ಪಾಕಿಸ್ತಾನ ರಕ್ಷಣಾ ಸಚಿವ ಅಸಿಫ್ ಪ್ರತಿಕ್ರಿಯಿಸಿದ್ದು, ಭಾರತ ದಾಳಿ ಮಾಡಿದರೆ ಮಾತ್ರ ಪಾಕಿಸ್ತಾನ ಪ್ರತಿಕ್ರಿಯಿಸುತ್ತದೆ. ಕಳೆದ ಹದಿನೈದು ದಿನಗಳಿಂದ ನಾವು ಭಾರತದ ವಿರುದ್ಧ ಯಾವುದೇ ಬಗೆಯ ಕ್ರಮಕೈಗೊಳ್ಳುವಿದಲ್ಲ ಎಂದು ಹೇಳುತ್ತಿದ್ದೇವೆ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ನಾವು ಪ್ರತಿದಾಳಿ ಮಾಡುತ್ತೇವೆ. ಇನ್ನು ಒಂದು ವೇಳೆ ಭಾರತ ಹಿಂದೆ ಸರಿದರೆ ನಾವು ಸಹ ಖಂಡಿತವಾಗಿಯೂ ಈ ಉದ್ವಿಗ್ಬತೆಯನ್ನು ಶಮನಗೊಳಿಸುತ್ತೇವೆ ಎಂದಿದ್ದಾರೆ.
ಇನ್ನು ಉಗ್ರರ ಮೇಲೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಏರ್ ಸ್ಟ್ರೈಕ್ ಮಾಡಿದ ಭಾರತ ದಾಳಿಯಲ್ಲಿ ಸುಮಾರು 100ಕ್ಕೂ ಅಧಿಕ ಉಗ್ರರು ಉಡೀಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.ಇದರ ಬೆನ್ನಲೇ ಇಂದು ಬೆಂಗಳೂರಿನ 35 ಸ್ಥಳಗಳಲ್ಲಿ ಯುದ್ಧದ ಸೈರನ್ ಮೊಳಗಿತು. ಈಗಾಗಲೇ ದೇಶದಾದ್ಯಂತ ಅಣುಕು ಪ್ರದರ್ಶನ ನಡೆಯುತ್ತಿದ್ದು, ಏನಾದರು ಪಾಕಿಸ್ತಾನ್ ಭಾರತದ ಮೇಲೆ ದಾಳಿ ಮಾಡಿದರೆ ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಕುರಿತು ಅಣುಕು ಪ್ರದರ್ಶನ ನಡೆಯುತ್ತಿದೆ.