ಜೈಸಲ್ಮೇರ್ : ಪಾಕಿಸ್ತಾನವು ಇಂದು ಜಮ್ಮು ಸೇರಿದಂತೆ ಭಾರತದ ಹಲವು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ರಾಜಸ್ಥಾನದ ಜೈಸಲ್ಮೇರ್ ವಾಯುನೆಲೆ ಮೇಲೂ ಪಾಕ್ ಸೇನೆಯಿಂದ ದಾಳಿ ನಡೆಸಿದ್ದು, ಜೆಸಲ್ಮೇರ್ ನಲ್ಲಿ ಭಾರೀ ಸ್ಪೋಟದ ಶಬ್ದ ಕೇಳಿ ಬಂದಿದೆ.
#WATCH | Pakistani drones intercepted by Indian air defence in Jaisalmer. Explosions can be heard, and flashes in the sky can be seen.
(Editors note: Background conversation is of ANI reporters witnessing live interception of Pakistani drones by Indian Air Defence ) pic.twitter.com/Ca1vpmNtjV
— ANI (@ANI) May 8, 2025
ಜಮ್ಮು, ಆರ್ ಎಸ್ ಪುರ, ಚಾನಿ ಹಿಮತ್ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿನ ಮಿಲಿಟರಿ ಮತ್ತು ನಾಗರಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಯನ್ನು ನಡೆಸಿದೆ.
ಆದಾಗ್ಯೂ, ಎಸ್ 400 ಮತ್ತು ಆಕಾಶ್ ವ್ಯವಸ್ಥೆಗಳನ್ನು ಒಳಗೊಂಡ ಭಾರತದ ಅತ್ಯಾಧುನಿಕ ವಾಯು ರಕ್ಷಣಾ ಪೋರ್ಟ್ಫೋಲಿಯೊ ಪಾಕಿಸ್ತಾನದ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿದೆ.