ಮಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಆರ್ಭಟದ ನಡುವೆ ಇಲಿ ಜ್ವರದ ಆತಂಕ ಶುರುವಾಗಿದ್ದು, ಇಲಿ ಜ್ವರಕ್ಕೆ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಇಲಿ ಜ್ವರದಿಂದ ಬಳಲುತ್ತಿದ್ದ ಕನಕಮಜಲು ಗ್ರಾಮದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಯುವರಾಜ್ ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವರಾಜ್ ಮೃತಪಟ್ಟಿದ್ದಾನೆ. ಯುವಕ ರಕ್ತ ಪರೀಕ್ಷೆಯ ವರದಿಯಲ್ಲಿ ಮೃತ ಯುವರಾಜನಿಗೆ ಇಲಿ ಜ್ವರ ಇರುವುದು ದೃಢಪಟ್ಟಿದೆ.