ಶ್ರೀನಗರ : ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ NIA ಅಧಿಕಾರಿಗಳಿಗೆ ದೊಡ್ಡ ಸುಳಿವು ಸಿಕ್ಕಿದ್ದು, ದಾಳಿಗೂ ಮುನ್ನವೇ ಉಗ್ರರು ಪಹಲ್ಗಾಮ್ ಗೆ ಬಂದು ಮಾರು ವೇಷದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ಎನ್ಐಎ ತನಿಖೆಯಲ್ಲಿ ಬಯಲಾಗಿದ್ದು,ಅಲ್ಲದೆ ಇನ್ನೂ ನಾಲ್ಕು ಅಂಶಗಳು NIA ತನಿಖೆಯಲ್ಲಿ ತಿಳಿದು ಬಂದಿದೆ.
ಹೌದು ಉಗ್ರರು ಮಾರು ವೇಷದಲ್ಲಿ ಮೊದಲು ಕಾಶ್ಮೀರಕ್ಕೆ ಆಗಮಿಸಿ ಅಲ್ಲಿಂದ ಬಳಿಕ ಪಹಲ್ಗಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಚೀನಾ ನಿರ್ಮಿತ ಡ್ರೋನ್ ಗಳನ್ನು ಉಗ್ರರು ಬಳಸಿದ್ದಾರೆ ಎನ್ನಲಾಗಿದೆ. ದಾಳಿ ನಡೆಸಬೇಕಾದ ಸ್ಥಳ ಕೂಡ ಮುಂಚೇನೆ ಪರಿಶೀಲನೆ ಮಾಡಿದ್ದರು ಎನ್ನಲಾಗುತ್ತಿದೆ. ಚೀನಾ ಡೋಂಟ್ ಬಳಸಿಯೇ ಉಗ್ರರಿಗೆ ಶಸ್ತ್ರಾಸ್ತ್ರವನ್ನು ಪೂರೈಕೆ ಆಗಿದೆ ಎನ್ನಲಾಗುತ್ತಿದೆ ದಾಳಿ ಬಳಿಕ ಕಾಶ್ಮೀರದಲ್ಲಿ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಅಲ್ಲದೇ ಅವರು ಪುಲ್ವಾಮಾ ಅಥವಾ ಅನಂತನಾಗಗೆ ಪಲಾಯನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೀಗ ಉಗ್ರರ ಜಾಡು ಬೆನ್ನತ್ತಿರುವ ಸೇನೆಯ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಸಿಗರ ಸೋಗಿನಲ್ಲಿ ಮೊದಲು ಕಾಶ್ಮೀರಕ್ಕೆ ಬಂದು ಹೋಗಿದ್ದಾರೆ ಎನ್ನಲಾಗುತ್ತಿದ್ದು, ಪ್ರವಾಸಿಗರ ಜೊತೆಗೆ ಬೆರೆಯಲು ವೇಷ ಭೂಷಣ ಕೂಡ ಖರೀದಿ ಮಾಡಿದ್ದರು ಎನ್ನಲಾಗಿದೆ.ನಕಲಿ ಗುರುತಿನ ಚೀಟಿ ಬಳಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ದಾಳಿಯ ನಂತರ ಪರಾರಿ ಆಗಿದ್ದಾರೆ ಎನ್ನಲಾಗಿದೆ.