ಬೆಂಗಳೂರು : ಸಾವಿರಾರು ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಆಸ್ತಿ ಪರಭಾರೆ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ವಿಚಾರವನ್ನು ಚರ್ಚೆ ಮಾಡಲು ಕಾಂಗ್ರೆಸ್ ನವರು ಸಹಕಾರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಪದಲ್ಲಿ ಎರಡು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಬೆಂಗಳೂರು ಸೇರಿ 22 ಜಿಲ್ಲೆಗಳಲ್ಲಿ ನೆರೆಯಿಂದ ಹಾನಿಯಾಗಿದೆ. ನೆರೆಯಿಂದ ಹಾನಿಯಾದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. 40% ಕಮಿಷನ್ ಬಗ್ಗೆ ಚರ್ಚೆ ಮಾಡಬೇಕಾ? ಬೇಡ್ವಾ? ಎಂದು ಚರ್ಚೆ ಮಾಡುತ್ತೇನೆ ಎಂದರು.
BREAKING NEWS : ಸೋನಾಲಿ ಫೋಗಟ್ ಸಾವಿನ ಪ್ರಕರಣ ʻ ಸಿಬಿಐಗೆ ವಹಿಸಲಾಗುವುದು ʼ : ಗೋವಾ ಸಿಎಂ ಸಾವಂತ್
ನಿರ್ದಿಷ್ಟ ದಾಖಲೆ ಇಟ್ಟುಕೊಂಡು ಚರ್ಚಿಸಿದರೆ ಮಹತ್ವ ಇರುತ್ತದೆ. ದಾಖಲೆ ಇಲ್ಲದೆ ಚರ್ಚೆ ಮಾಡಿದರೆ ಸಂತೆ ಭಾಷಣ ಆಗುತ್ತದೆ. ಈ ಬಗ್ಗೆ ನಮ್ಮ ಶಾಸಕರ ಸಲಹೆ ನೀಡಿದ್ದೇನೆ. ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆ ಕೊಡಿ ಎಂದು ಕೆಣಕಿದ್ದಾರೆ. ಸಾವಿರಾರು ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಆಸ್ತಿ ಪರಭಾರೆ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ವಿಚಾರವನ್ನು ಚರ್ಚೆ ಮಾಡಲು ಕಾಂಗ್ರೆಸ್ ನವರು ಸಹಕಾರಿಸಬೇಕು ಎಂದು ಹೇಳಿದ್ದಾರೆ.