ನವದೆಹಲಿ : ಭಾರತದ ಹಲವಾರು ನಗರಗಳಲ್ಲಿ ಮೈಕ್ರೋ-ಬ್ಲಾಗಿಂಗ್ ಸೇವೆ ಟ್ವಿಟರ್ ಸರ್ವರ್ ಡೌನ್ ಆಗಿದ್ದು, ಸೇವೆ ಸ್ಥಗಿತವಾಗಿದ್ದು, ಬಳಕೆದಾರರು ಪರದಾಡುತ್ತಿದ್ದಾರೆ. ಅದ್ರಂತೆ, ಹಲವಾರು ಬಳಕೆದಾರರು ಫೋನ್ಗಳು ಮತ್ತು ಡೆಸ್ಕ್ಟಾಪ್ಗಳೆರಡರಲ್ಲೂ ಟ್ವಿಟ್ಟರ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಸಂಜೆ 4:45 ರಿಂದ ಸಂಜೆ 5:00 ರವರೆಗೆ ಟ್ವಿಟ್ಟರ್ನ ದೂರುಗಳು ಹೆಚ್ಚಾಗುತ್ತಲೇ ಇವೆ. ಅದ್ರಂತೆ, ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್ನಿಂದ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಲಾಗ್ತಿದೆ.
ಇನ್ನು ಸೇವೆ ಸ್ಥಗಿತದ ವರದಿಗಳಿಗೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.