ಕಠ್ಮಂಡು : ನೇಪಾಳದಲ್ಲಿ ಇಂದು (ಅಕ್ಟೋಬರ್ 19) ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಕಠ್ಮಂಡುವಿನ ಪೂರ್ವಕ್ಕೆ 53 ಕಿಮೀ ದೂರದಲ್ಲಿ ಭೂಮಿ ನಡುಗಿದ್ದು, ಮಧ್ಯಾಹ್ನ 2.52 ನಿಮಿಷಕ್ಕೆ ಈ ಭೂಕಂಪದ ಅನುಭವವಾಗಿದೆ. ಆದರೆ, ಇದುವರೆಗೆ ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಜುಲೈ ತಿಂಗಳ ಆರಂಭದಲ್ಲಿ ನೇಪಾಳದಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.0 ಎಂದು ಅಳೆಯಲಾಗಿದೆ. ಈ ವೇಳೆ ಕಠ್ಮಂಡುವಿನಿಂದ 147 ಕಿ.ಮೀ ದೂರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಭೂಮಿ ನಡುಗಿದೆ. ನೇಪಾಳ ಕಾಲಮಾನದ ಪ್ರಕಾರ ಬೆಳಗ್ಗೆ 8:13ಕ್ಕೆ ಭೂಕಂಪದ ಅನುಭವವಾಗಿದೆ. ಖೋಟಾಂಗ್ ಜಿಲ್ಲೆಯ ಮಾರ್ಟಿಮ್ ಬಿರ್ಟಾ ಎಂಬ ಸ್ಥಳದಲ್ಲಿ ಈ ಕಂಪನಗಳು ಸಂಭವಿಸಿವೆ ಎಂದು NEMRC ಹೇಳಿದೆ. ಪೂರ್ವ ನೇಪಾಳದ 10 ಕಿ.ಮೀ ವ್ಯಾಪ್ತಿಯೊಳಗೆ ಭೂಕಂಪದ ಕೇಂದ್ರಬಿಂದುವನ್ನು ಅಳೆಯಲಾಗಿದೆ.
Nepal | An earthquake of magnitude 5.1 occurred 53km east of Kathmandu today at around 2.52 pm. The depth of the earthquake was 10 km below the ground: National Center for Seismology
— ANI (@ANI) October 19, 2022