ಹೈದರಾಬಾದ್: ಹೊಸದಾಗಿ ನಿರ್ಮಾಣವಾಗುತ್ತಿರುವ ತೆಲಂಗಾಣ ರಾಜ್ಯ ಸಚಿವಾಲಯಕ್ಕೆ ಭಾರತದ ಸಂವಿಧಾನದ ಸ್ಥಾಪಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಇಂದು ಘೋಷಿಸಿದ್ದಾರೆ.
ಈ ನಿರ್ಧಾರವನ್ನ ಜಾರಿಗೆ ತರಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಏತನ್ಮಧ್ಯೆ, ಹೊಸ ಸಂಸತ್ತಿಗೆ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂಬ ತೆಲಂಗಾಣ ಸರ್ಕಾರದ ಬೇಡಿಕೆಯನ್ನ ಪರಿಗಣಿಸಲು ಸಿಎಂ ಕೆಸಿಆರ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ.