ಶಿವಮೊಗ್ಗ : ಸಾವರ್ಕರ್ ಫ್ಲೆಕ್ಸ್ ತೆರವು ವಿವಾದ ಬೆನ್ನೆಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸಿದ್ದು, 2 ಗಂಟೆಗಳ ಅಂತರದಲ್ಲಿ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಆಘಾತಕಾರಿ ಘಟನೆಗಳು ನಡೆದಿವೆ.
ನಗರದ ಅಶೋಕ ನಗದರಲ್ಲಿ ಪ್ರವೀಣ್(27) ಎನ್ನುವ ಯುವಕನಿಗೆ ಚಾಕು ಇರಿದಿದ್ದು, ಅಂಗಡಿ ಮುಚ್ಚಿ ತೆರಳುವಾಗ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದಾರೆ ಎನ್ನಲಾಗ್ತಿದೆ. ಸಧ್ಯ ಗಾಯಾಳುವಿನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಇದಕ್ಕೂ ಮುನ್ನ ಗಂಟೆಗಳ ಮುಂಚೆ ನಗರದ ಉಪ್ಪಾರಕೇರಿಯಲ್ಲಿ 20 ವರ್ಷದ ಪ್ರೇಮ್ ಸಿಂಗ್ ಎಂಬಾತನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಇನ್ನು ಗಾಯಾಳುವಿನನ್ನೂ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ತೆರವು ವಿವಾದ ಭುಗಿಲೆದ್ದಿದೆ. ಈ ಕಾರಣದಿಂದಾಗಿಯೇ ಇಂದಿನಿಂದ ಮೂರು ದಿನ ನಗರದಾಧ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.