ನವದೆಹಲಿ : ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಚುನಾವಣಾ ಆಯೋಗವು ಸೋಮವಾರ ‘ಉರಿಯುವ ಟಾರ್ಚ್’ (Mashaal) ಅನ್ನು ಚುನಾವಣಾ ಚಿಹ್ನೆಯಾಗಿ ಹಂಚಿಕೆ ಮಾಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಹೆಸರು “ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ” ಆಗಿರುತ್ತದೆ.
ಆದಾಗ್ಯೂ, ಏಕನಾಥ್ ಶಿಂಧೆ ಬಣವು ತನ್ನ ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಕಳುಹಿಸಿದ ಮೂರು ಸಲಹೆಗಳನ್ನ ಚುನಾವಣಾ ಆಯೋಗವು ಸ್ವೀಕರಿಸಲಿಲ್ಲ. ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಮೂರು ಚುನಾವಣಾ ಚಿಹ್ನೆಗಳನ್ನ ಕಳುಹಿಸುವಂತೆ ಚುನಾವಣಾ ಆಯೋಗವು ಶಿಂಧೆ ಶಿಬಿರವನ್ನ ಕೇಳಿದೆ.
ಏಕನಾಥ್ ಶಿಂಧೆ ನೇತೃತ್ವದ ಪಕ್ಷದ ಹೆಸರು ‘ಬಾಳಾಸಾಹೇಬ್ ಆಂಚಿ ಶಿವಸೇನೆ’ ಎಂದು ಚುನಾವಣಾ ಆಯೋಗದ ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 8 ರಂದು ಶಿವಸೇನೆಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನ ಚುನಾವಣಾ ಆಯೋಗವು ಸ್ಥಗಿತಗೊಳಿಸಿತ್ತು ಮತ್ತು ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಗುಂಪುಗಳು ನವೆಂಬರ್ 3 ರಂದು ಮುಂಬೈನಲ್ಲಿ ನಡೆಯಲಿರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಹೆಸರನ್ನ ಬಳಸದಂತೆ ನಿರ್ಬಂಧಿಸಿತ್ತು.