ನವದೆಹಲಿ : ಹಣಕಾಸು ಸೇವೆಗಳ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಕಂದಾಯ ಕಾರ್ಯದರ್ಶಿಯಾಗಿ ಸರ್ಕಾರ ಬುಧವಾರ ನೇಮಿಸಿದೆ.
ನವೆಂಬರ್ 30 ರಂದು ನಿವೃತ್ತರಾಗಲಿರುವ ತರುಣ್ ಬಜಾಜ್ ಅವ್ರ ಉತ್ತರಾಧಿಕಾರಿಯಾಗಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಂಜಯ್ ಮಲ್ಹೋತ್ರಾ ಅವರು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯಲ್ಲಿ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ ಹುದ್ದೆಯನ್ನ ವಹಿಸಿಕೊಳ್ಳಲಿದ್ದಾರೆ. ಅಂದ್ಹಾಗೆ, ತರುಣ್ ಬಜಾಜ್ ನಿವೃತ್ತರಾದ ನಂತ್ರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸರ್ಕಾರವು ವಿವೇಕ್ ಜೋಶಿ ಅವರನ್ನು ಹಣಕಾಸು ಸೇವೆಗಳ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರು ಪ್ರಸ್ತುತ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಜನಗಣತಿ ಆಯುಕ್ತರಾಗಿದ್ದಾರೆ. ಅವರನ್ನು ಕಂದಾಯ ಇಲಾಖೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಿಸಲಾಗುವುದು.