ನವದೆಹಲಿ : ಡಿಸೆಂಬರ್ 1 ರಂದು ರಿಟೇಲ್ ಸೆಂಟ್ರಲ್ ಬ್ಯಾಂಕ್ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿದೆ. ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿರಲಿದ್ದು, ಅದು ಕಾನೂನುಬದ್ಧ ಟೆಂಡರ್’ನ್ನ ಪ್ರತಿನಿಧಿಸುತ್ತದೆ ಎಂದು ಆರ್ಬಿಐ ತಿಳಿಸಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆರ್ಬಿಐ “ಭಾಗವಹಿಸುವ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡಿರುವ ಕ್ಲೋಸ್ಡ್ ಯೂಸರ್ ಗ್ರೂಪ್ (CUG)ಯಲ್ಲಿ ಆಯ್ದ ಸ್ಥಳಗಳನ್ನ ಪೈಲಟ್ ಒಳಗೊಳ್ಳಲಿದ್ದಾರೆ” ಎಂದು ತಿಳಿಸಿದೆ.
ಪ್ರಸ್ತುತ ಕಾಗದದ ಕರೆನ್ಸಿ ಮತ್ತು ನಾಣ್ಯಗಳನ್ನ ಹೇಗೆ ಬಿಡುಗಡೆ ಮಾಡಲಾಗ್ತಿದ್ಯಾ ಅದೇ ಮುಖಬೆಲೆಯ ನಾಣ್ಯಗಳಲ್ಲಿ ಡಿಜಿಟಲ್ ಕರೆನ್ಸಿ ನೀಡಲಾಗುವುದು. ಇದನ್ನ ಮಧ್ಯವರ್ತಿಗಳ ಮೂಲಕ ಅಂದರೆ ಬ್ಯಾಂಕುಗಳ ಮೂಲಕ ವಿತರಿಸಲಾಗುವುದು.
ಭಾಗವಹಿಸುವ ಬ್ಯಾಂಕುಗಳು ನೀಡುವ ಮತ್ತು ಮೊಬೈಲ್ ಫೋನ್ಗಳು / ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಡಿಜಿಟಲ್ ರೂಪಾಯಿಯೊಂದಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
BIGG NEWS: ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ ಟಿ ರವಿ ಅವಹೇಳನಕಾರಿ ಹೇಳಿಕೆ ಆರೋಪ; ಯುವ ಕಾಂಗ್ರೆಸ್ನಿಂದ ದೂರು
ರಾಜ್ಯದೆಲ್ಲೆಡೆ ಇಂದು ‘ಚಂಪಾ ಷಷ್ಠಿ’ ಸಂಭ್ರಮ : ಆಚರಣೆಯ ಮಹತ್ವವೇನು ತಿಳಿಯಿರಿ..?