ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದ್ರಂತೆ, ಸಧ್ಯ ಪ್ರಧಾನಮಂತ್ರಿಯವರು ತುರ್ತಾಗಿ ಅಹ್ಮದಾಬಾದ್’ಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ವರ್ಷದ ಜೂನ್’ನಲ್ಲಿ 99ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಮೋದಿ ಅವರನ್ನ ಅಹಮದಾಬಾದ್’ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ನ ಹೇಳಿಕೆಯು ಅವ್ರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ. ಆಸ್ಪತ್ರೆಯು ಬೇರೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ.
ಬಿಜೆಪಿಯ ಗುಜರಾತ್ ಶಾಸಕರಾದ ದರ್ಶನಬೆನ್ ವಘೇಲಾ ಮತ್ತು ಕೌಶಿಕ್ ಜೈನ್ ಅವರು ಆಸ್ಪತ್ರೆಗೆ ತಲುಪಿದ್ದಾರೆ.
ತಮ್ಮ ತಾಯಿಯೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ಆಗಾಗ್ಗೆ ಮಾತನಾಡುವ ಪ್ರಧಾನಿ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗುಜರಾತ್’ಗೆ ಹೋಗಿದ್ದಾಗ ಅವರನ್ನ ಇತ್ತೀಚೆಗೆ ಭೇಟಿ ಮಾಡಿದ್ದರು. ಪ್ರಧಾನಿ ಹೀರಾಬೆನ್ ಮೋದಿ ಅವರೊಂದಿಗೆ ಹರಟೆ ಹೊಡೆಯುತ್ತಿರುವ ಮತ್ತು ಚಹಾ ಕುಡಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.
ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ಟಿ.ಎ ಶರವಣ ಒತ್ತಾಯ |Belagavi Winter Session
PM Modi Mother Health Update : ಪ್ರಧಾನಿ ಮೋದಿ ತಾಯಿ ಆರೋಗ್ಯ ಸ್ಥಿರವಾಗಿದೆ : ಯುಎನ್ ಮೆಹ್ತಾ ಆಸ್ಪತ್ರೆ ಮಾಹಿತಿ