ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದ್ರಂತೆ, ಸಧ್ಯ ಪ್ರಧಾನಮಂತ್ರಿಯವರು ತುರ್ತಾಗಿ ಅಹ್ಮದಾಬಾದ್’ಗೆ ಬಂದಿದ್ದು, ತಾಯಿ ಆರೋಗ್ಯ ವಿಚಾರಣೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.
ಈ ವರ್ಷದ ಜೂನ್’ನಲ್ಲಿ 99ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಮೋದಿ ಅವರನ್ನ ಅಹಮದಾಬಾದ್’ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ನ ಹೇಳಿಕೆಯು ಅವ್ರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ. ಆಸ್ಪತ್ರೆಯು ಬೇರೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ.
ಬಿಜೆಪಿಯ ಗುಜರಾತ್ ಶಾಸಕರಾದ ದರ್ಶನಬೆನ್ ವಘೇಲಾ ಮತ್ತು ಕೌಶಿಕ್ ಜೈನ್ ಅವರು ಆಸ್ಪತ್ರೆಗೆ ತಲುಪಿದ್ದಾರೆ.
ತಮ್ಮ ತಾಯಿಯೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ಆಗಾಗ್ಗೆ ಮಾತನಾಡುವ ಪ್ರಧಾನಿ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗುಜರಾತ್’ಗೆ ಹೋಗಿದ್ದಾಗ ಅವರನ್ನ ಇತ್ತೀಚೆಗೆ ಭೇಟಿ ಮಾಡಿದ್ದರು. ಪ್ರಧಾನಿ ಹೀರಾಬೆನ್ ಮೋದಿ ಅವರೊಂದಿಗೆ ಹರಟೆ ಹೊಡೆಯುತ್ತಿರುವ ಮತ್ತು ಚಹಾ ಕುಡಿಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.
ಕೋಲಾರದಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ದಾಳಿ : ರಕ್ತ ಬರುವಂತೆ ಹಲ್ಲೆ ನಡೆಸಿದ ಸೈಕೋಪಾತ್..!
BIGG NEWS : ಡಿ.30 ರಂದು ಮಂಡ್ಯದಲ್ಲಿ ‘ಅಮಿತ್ ಶಾ’ ಬೃಹತ್ ಸಮಾವೇಶ : ಬಿಜೆಪಿಯಿಂದ ಭರ್ಜರಿ ಸಿದ್ದತೆ