ಬಲೂಚಿಸ್ತಾನ : ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಅಪಘಾತದ ಸಮಯದಲ್ಲಿ ಇಬ್ಬರು ಮೇಜರ್–ಶ್ರೇಣಿಯ ಅಧಿಕಾರಿಗಳು ಮತ್ತು ಮೂವರು ವಿಶೇಷ ರಕ್ಷಣಾ ಗುಂಪು (SPG) ಕಮಾಂಡೋಗಳು ಹೆಲಿಕಾಪ್ಟರ್ನಲ್ಲಿದ್ದರು. ಅದ್ರಂತೆ, ಪೈಲಟ್ ಸೇರಿದಂತೆ ಎಲ್ಲರೂ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದ ಪತ್ರಕರ್ತರೊಬ್ಬರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನ ನೀಡಿದ್ದು, “ತುಂಬಾ ದುರದೃಷ್ಟಕರ ಮತ್ತು ದುಃಖದ ಸುದ್ದಿ. ಬಲೂಚಿಸ್ತಾನದಿಂದ ಮತ್ತೊಂದು ಹೆಲಿಕಾಪ್ಟರ್ ಅಪಘಾತ ವರದಿಯಾಗಿದೆ. ಇಬ್ಬರು ಮೇಜರ್’ಗಳು ಮತ್ತು ಮೂವರು ಎಸ್ಎಸ್ಜಿ ಕಮಾಂಡೋಗಳು ಸೇರಿದಂತೆ ಆರು ಜನರು ಅಪಘಾತಕ್ಕೀಡಾದ ಹೆಲಿಕಾಪ್ಟರ್’ನಲ್ಲಿದ್ದರು. ಎಲ್ಲರೂ ಸಾವನ್ನಪ್ಪಿದ್ದಾರೆ” ಎಂದಿದ್ದಾರೆ.
Two Pakistan Army majors were among six military personnel who were martyred when a helicopter crashed in Balochistan, reports Pakistan's Geo News
— ANI (@ANI) September 26, 2022
ಬಲೂಚಿಸ್ತಾನ ಪ್ರಾಂತ್ಯದ ಹರ್ನೈ ಬಳಿ ಒಂದೇ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಪ್ರಸ್ತುತ, ಅಪಘಾತದ ಕಾರಣ ತಿಳಿದುಬಂದಿಲ್ಲ.